ಭಾರತದ ಖಾತೆಗೆ ಮತ್ತೊಂದು ಚಿನ್ನ: ಪದಕ ಕೊರಳಿಗೇರಿಸಿದ ಬಂಗಾರದ ಬಾಲೆ ಸಿಂಧು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಮನ್‌ವೆಲ್ತ್‌ ಗೇಮ್ಸ್ ನ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಕೆನಡಾ ಆಟಗಾರ್ತಿ ಮಿಚೆಲ್ ಲೀ ವಿರುದ್ಧ 21-15, 21-13 ಅಂತರದ ಸೆಟ್‌ಗಳಿಂದ ಮಣಿಸಿದ ಸಿಂಧು ಚಿನ್ನದ ಪದಕ ಕೊರಳಿಗೆ ಏರಿಸಿಕೊಂಡಿದ್ದಾರೆ.

2014ರಲ್ಲಿ ಕಂಚಿನ ಪದಕ, 2018ರಲ್ಲಿ ಬೆಳ್ಳಿ ಪದಕದ ಬಳಿಕ 2022ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಭಾರತದ ಹೆಮ್ಮೆಯ ಮಗಳು ಸಿಂಧು. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಗಳಿಸಿದ ಪದಕಗಳ ಸಂಖ್ಯೆ ಈಗ 55 ಕ್ಕೆ‌ಏರಿದೆ. ಈ ಪೈಕಿ 18 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!