Wednesday, October 5, 2022

Latest Posts

ಗಡಿದಾಟಿ ಒಳಬಂದ ಪಾಕ್ ಯುದ್ಧ ನೌಕೆಯನ್ನು ಅಟ್ಟಾಡಿಸಿ ಅಟ್ಟಿದ ಭಾರತೀಯ ಭದ್ರತಾ ಪಡೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್ ಭಾಗದಲ್ಲಿ ಭಾರತದ ಗಡಿಯೊಳಕ್ಕೆ ಬಂದಿದ್ದ ಪಾಕಿಸ್ತಾನ ಸೇನೆಗೆ ಸೇರಿದ ನೌಕೆಯನ್ನು ಕರಾವಳಿ ನೌಕಾಪಡೆ ಅಟ್ಟಾಡಿಸಿ ಮತ್ತೆ ಗಡಿಯಾಚೆಗೆ ಅಟ್ಟಿರುವ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ.

ದಾಖಲೆಗಳ ಪ್ರಕಾರ ಈ ಘಟನೆ ಜುಲೈ ತಿಂಗಳ ಮೊದಲಾರ್ಧದಲ್ಲಿ ನಡೆದಿದೆ. ಪಾಕಿಸ್ತಾನದ ನೌಕಾಪಡೆಗೆ ಸೇರಿದ ಅಲಂಗೀರ್ ಎಂಬ ಯುದ್ಧ ನೌಕೆ, ಗಡಿ ದಾಟಿ ಬಂದಿರುವುದನ್ನು ಕರಾವಳಿ ಕಾವಲು ಪಡೆ ಕಣ್ಗಾವಲು ವಿಮಾನವು ಪತ್ತೆಹಚ್ಚಿದ್ದವು.

ತಕ್ಷಣ ಯುದ್ಧನೌಕೆಗೆ ಗಡಿ ದಾಟಿರುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತಲ್ಲದೆ, ತನ್ನ ಪ್ರದೇಶಕ್ಕೆ ಹಿಂತಿರುಗುವಂತೆ ಸೂಚಿಸಲಾಯಿತು. ನೌಕೆಯ ಕ್ಯಾಪ್ಟನ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯುದ್ಧನೌಕೆಗಳ ಇರುವಿಕೆಯ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ರವಾನಿಸಲಾಯಿತು. ಜೊತೆಗೆ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ಗಡಿಯಾಚೆಗೆ ಅಟ್ಟಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!