ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸೋನಾಕ್ಷಿ ಸಿನ್ಹಾಗೆ ಇಂದು ಜನ್ಮದಿನದ ಸಂಭ್ರಮ. ಸೋನಾಕ್ಷಿ ಬರ್ಥ್‌ಡೇಗೆ ಬಾಯ್‌ಫ್ರೆಂಡ್ ಜಹೀರ್ ಇಕ್ಬಾಲ್ ಸರ್ಪೈಸ್ ನೀಡಿದ್ದು ಪ್ರಪೋಸಲ್ ಮೂಲಕ!
ಹೌದು, ಸೋನಾಕ್ಷಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಜಹೀರ್ ಕಡೆಯಲ್ಲಿ ಐ ಲವ್ ಯು ಎಂದು ಹೇಳಿ ಪ್ರೇಮ ನಿವೇದನೆ ಮಾಡಿದ್ದಾರೆ. ಇವರಿಬ್ಬರೂ ಡಬಲ್ ಎಕ್ಸ್‌ಎಲ್ ಸಿನಿಮಾದಲ್ಲಿ ನಟಿಸಿದ್ದು, ಸುಮಾರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ.
ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಪ್ರಪೋಸ್ ಮಾಡಿದ್ದಾಯ್ತು ಇನ್ನು ಮದುವೆ ಯಾವಾಗ ಎಂದು ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಹಲವು ಮಂದಿ ಈಗೆಲ್ಲಾ ಸ್ನೇಹಿತರಿಗೂ ಐ ಲವ್ ಯು ಹೇಳೋದು ಕಾಮನ್ ಅದನ್ನು ದೊಡ್ಡ ವಿಷಯ ಮಾಡಬೇಕಿಲ್ಲ ಎಂದಿದ್ದಾರೆ.