ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾದ ಹ್ಯಾಪಿ ಪ್ಯಾಸಿಯಾ ಅಲಿಯಾಸ್ ಹರ್‌ಪ್ರೀತ್ ಸಿಂಗ್‌ನನ್ನು ಅಮೆರಿಕದಲ್ಲಿ ಎಫ್‌ಬಿಐ ಬಂಧಿಸಿದೆ.
ಪ್ಯಾಸಿಯಾ ಭಾರತಕ್ಕೆ ಬೇಕಾಗಿರುವ ಅಪರಾಧಿಗಳಲ್ಲಿ ಒಬ್ಬನಾಗಿದ್ದು, ಈತನ ತಲೆಗೆ ಭಾರತ ಸರ್ಕಾರ ₹5ಲಕ್ಷ ಬಹುಮಾನವನ್ನು ಘೋಷಿಸಿತ್ತು. ಈ ವರ್ಷದ ಜನವರಿಯಲ್ಲಿ, ಹಲವಾರು ಗ್ರೆನೇಡ್ ದಾಳಿಗಳಲ್ಲಿ ಅವನು ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಎನ್‌ಐಎ ಆತನ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನವನ್ನು ಘೋಷಿಸಿತ್ತು.
ಈ ಹ್ಯಾಪಿ ಪಾಸಿಯಾ ಪಾಕಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಜೊತೆ ಹಾಗೂ ಖಲಿಸ್ತಾನಿ ಉಗ್ರಗಾಮಿ ಗುಂಪಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಜೊತೆಗೂ ಸಂಪರ್ಕ ಹೊಂದಿದ್ದಾನೆ.
ಹ್ಯಾಪಿ 2021 ರಲ್ಲಿ, ಪ್ಯಾಸಿಯಾ ಮಾನವ ಕಳ್ಳಸಾಗಣೆ ಜಾಲದ ಸಹಾಯದಿಂದ ಮೆಕ್ಸಿಕೋ ಗಡಿಯ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ. ಪ್ರಸ್ತುತ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ವಿಚಾರಣೆ ನಡೆಸುತ್ತಿದೆ.