ಅಮೆರಿಕದಲ್ಲಿ ಭಾರತ ಮೂಲದ ಮತ್ತೊಬ್ಬನ ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಪಾರ್ಕಿಂಗ್‌ನಲ್ಲಿ ಕಾರೊಳಗೆ ಕುಳಿತಿದ್ದ 31 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗಷ್ಟೆ ಅನಿವಾಸಿ ಭಾರತೀಯನೊಬ್ಬನ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಇದೀಗ ಮತ್ತೊಂದು ಘಟನೆ ಇಂದು ಕೇಳಿ ಬಂದಿದೆ.
ವರದಿಗಳ ಪ್ರಕಾರ ಭಾರತದ ಪ್ರಜೆ, ಸ್ನೇಹಿತನ ಎಸ್‌ಯುವಿಯೊಳಗೆ ಮನೆಯ ಬಳಿಯೇ ಕುಳಿತಿದ್ದ. ಈ ವೇಳೆ ಆಗಮಿಸಿದ ಆಗಂತುಕರು ಶೂಟ್‌ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ನ್ಯೂ ಯಾರ್ಕಿನ ಸೌಥ್‌ ಓಜೋನ್‌ ಪಾರ್ಕ್‌ ಬಳಿ ಮೃತ ಸತ್ನಾಮ್‌ ಸಿಂಗ್‌ ಸ್ನೇಹಿತನ ಜೀಪ್‌ ರ್ಯಾಂಗ್ಲರ್‌ ಎಸ್‌ಯುವಿಯೊಳಗೆ ಕುಳಿತಿದ್ದ. ಆಗ ಒಬ್ಬ ವ್ಯಕ್ತಿ ಪಿಸ್ಟೋಲ್‌ ಜತೆಗೆ ಬಂದು, ಸತ್ನಾಮ್‌ ಸಿಂಗ್‌ಗೆ ಗುಂಡಿಕ್ಕಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 3.45ಕ್ಕೆ ಈ ಘಟನೆ ನಡೆದಿದೆ ಎಂದು ನ್ಯೂ ಯಾರ್ಕ್‌ ಡೈಲಿ ನ್ಯೂಸ್‌ ವರದಿ ಮಾಡಿದೆ. ಪೊಲೀಸರ ಮಾಹಿತಿ ಪ್ರಕಾರ ಸತ್ನಾಮ್‌ ಸಿಂಗ್ ಸಾವನ್ನಪ್ಪಿದ ಸ್ಥಳದಿಂದ ಕೊಂಚ ದೂರ ಅವರು ವಾಸಿಸುತ್ತಿದ್ದರು.
ಸದ್ಯ ಪ್ರಕರಣ ಸಂಬಂಧ ಯಾವುದೇ ಬಂಧನವಾಗಿಲ್ಲ.
ಕಳೆದ ವಾರವಷ್ಟೇ 25 ವರ್ಷದ ತೆಲಂಗಾಣ ಮೂಲದ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅದಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅನಿವಾಸಿ ಭಾರತೀಯ ಮೃತಪಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!