Wednesday, February 8, 2023

Latest Posts

ಫುಟ್ಬಾಲ್ ಪಂದ್ಯದ ಲೈವ್ ನೀಡುತ್ತಾ ಪ್ರಾಣ ಕಳೆದುಕೊಂಡ ಮತ್ತೊಬ್ಬ ಪತ್ರಕರ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಎರಡು ದಿನಗಳ ಹಿಂದೆ ಲೈವ್ ಫುಟ್ಬಾಲ್ ಪಂದ್ಯವನ್ನು ನೀಡುತ್ತಿದ್ದ ವೇಳೆ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಅವರು ಹೃದಯಾಘಾತದಿಂದ ನಿಧನರಾದರು. ಅವರ ಸಾವಿನ ಸುದ್ದಿ ಮರೆಯುವ ಮುನ್ನವೇ ಮತ್ತೊಬ್ಬ ಪತ್ರಕರ್ತ ಕೂಡ ಕೊನೆಯುಸಿರೆಳೆದಿದ್ದಾರೆ.  ಕತಾರ್‌ನ ಕ್ಯಾಸ್ ಟಿವಿ ಚಾನೆಲ್‌ನ ಫೋಟೋ ಜರ್ನಲಿಸ್ಟ್ ಖಾಲಿದ್ ಅಲ್ ಮಿಸ್ಲಾಮ್ ಕೂಡಾ ಹಠಾತ್ ನಿಧನರಾದರು.

ಆತನ ಸಾವಿಗೆ ಕಾರಣ ತಿಳಿದುಬಂದಿಲ್ಲ. ಗಲ್ಫ್ ಟೈಮ್ಸ್ ಟ್ವಿಟ್ಟರ್ ನಲ್ಲಿ ಖಾಲಿದ್ ನಿಧನಕ್ಕೆ ಸಂತಾಪ ಸೂಚಿಸಿದೆ. ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ನೇರ ಪಂದ್ಯದ ವೇಳೆ ಗ್ರಾಂಟ್ ಹೃದಯಾಘಾತಕ್ಕೆ ಒಳಗಾಗಿ ಸೀಟ್‌ನಲಲಿ ಕುಸಿದು ಬಿದ್ದರು. ವೈದ್ಯಕೀಯ ಸಿಬ್ಬಂದಿ ಆತನಿಗೆ ತುರ್ತಾಗಿ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ ವೇಳೆ  ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆದರೆ ಇದು ಸಹಜ ಸಾವಲ್ಲ ಎಂದು ಗ್ರಾಂಟ್ ಸಹೋದರ ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!