ಘರ್ಷಣೆಯಲ್ಲಿ ಹೆಚ್ಚಾಗಿ ಚೀನಾ ಸೈನಿಕರು ಗಾಯಗೊಂಡಿದ್ದಾರೆ: ಬಿಜೆಪಿ ಸಂಸದ ತಾಪಿರ್ ಗಾವೊ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಭಾರತೀಯ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಹೆಚ್ಚಿನ ಚೀನೀ ಸೈನಿಕರು ಗಾಯಗೊಂಡಿದ್ದಾರೆ ಎಂದು ಅರುಣಾಚಲ ಪೂರ್ವ ಸಂಸದ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ತಪಿರ್ ಗಾವೊ ಅವರು ಮಂಗಳವಾರ ಎಎನ್‌ಐಗೆ ಮಾಹಿತಿ ನೀಡಿದರು. ಭಾರತ ಮತ್ತು ಚೀನಾ ನಡುವಿನ ಗಡಿ ಘರ್ಷಣೆ ಬಗ್ಗೆ ಮಾತನಾಡುತ್ತಾ ಭಾರತೀಯ ಸೈನಿಕರಿಗಿಂತ ಚೀನೀ ಸೈನಿಕರ ಸಂಖ್ಯೆ ಹೆಚ್ಚು ಎಂದರು.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ದ ಕೃತ್ಯವನ್ನು ಖಂಡಿಸಿದ ಅವರು, “ಮೆಕ್‌ಮೋಹನ್ ರೇಖೆಯಲ್ಲಿ ಈ ಪುನರಾವರ್ತಿತ ಘಟನೆಗಳು ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ಹಾಳುಮಾಡುತ್ತವೆ. ಪಿಎಲ್‌ಎ ಕೃತ್ಯವನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತೇನೆ. ಗಡಿಯಲ್ಲಿ ಭಾರತೀಯ ಸೈನಿಕರು ಗೆದ್ದಿದ್ದಾರೆ. ನಾವು ಒಂದು ಇಂಚು ಕೂಡ ಕದಲುವುದಿಲ್ಲ ಮತ್ತು ಚೀನಾ ಅಂತಹ ಕೃತ್ಯಗಳನ್ನು ಮಾಡಿದರೆ ನಮ್ಮ ಸೈನಿಕರು ತಕ್ಕ ಉತ್ತರವನ್ನು ನೀಡುತ್ತಾರೆ, ”ಎಂದರು.

ಡಿಸೆಂಬರ್ 9 ರಂದು ಪಿಎಲ್‌ಎ ಪಡೆಗಳು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿಯನ್ನು ಪ್ರವೇಶಿಸಿದ್ದನ್ನು ಭಾರತೀಯ ಸೈನಿಕರು ತಡೆದಿದ್ದಾರೆ.  ಈ ಮುಖಾಮುಖಿಯು ಎರಡೂ ಕಡೆಯ ಸೈನಿಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಿಗೆ ಕಾರಣವಾಯಿತು. ಎರಡೂ ಕಡೆಯವರು ತಕ್ಷಣವೇ ಪ್ರದೇಶದಿಂದ ನಿರ್ಗಮಿಸಿದರು ಎಂಬ ಮಾಹಿತಿ ಹೊರಬದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!