ಬಾಲಿವುಡ್ ಅಂಗಳದಲ್ಲಿ ಮೂಡುತ್ತಿದೆ ಮತ್ತೊಂದು ಲವ್ ಸ್ಟೋರಿ: ಆರ್ಯನ್ ಡೇಟಿಂಗ್ ನೋರಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಅಂಗಳದಲ್ಲಿ ಇದೀಗ ಮತ್ತೊಂದು ಲವ್ ಸ್ಟೋರಿ ಕೇಳಿ ಬರುತ್ತಿದೆ. ಅದುವೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರದ್ದು.
ಹೌದು, ಸದ್ಯಆರ್ಯನ್ ಖಾನ್ ಖ್ಯಾತ ನಟಿ, ಡಾನ್ಸರ್ ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಈ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಆರ್ಯನ್ ಖಾನ್ ದುಬೈನಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಸಹೋದರಿ ಸುಹಾನಾ ಖಾನ್, ಕರಣ್ ಜೋಹರ್ ಕೂಡ ಜೊತೆಯಲ್ಲಿದ್ದರು. ನೋರಾ ಕೂಡ ದುಬೈನಲ್ಲಿ ಇದ್ದಾರೆ. ನೋರಾ ಮತ್ತು ಆರ್ಯನ್ ಇಬ್ಬರ ಪೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಲ್ಲದೆ ಇಬ್ಬರ ನಡುವೆ ಡೇಟಿಂಗ್ ವದಂತಿ ಸೃಷ್ಟಿಸಿದೆ.

ಅಭಿಮಾನಿಗಳು ಇಬ್ಬರ ಫೋಟೋವನ್ನು ಕೊಲ್ಯಾಜ್ ಮಾಡಿತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, ‘ನೋರಾ ಕರಣ್ ಜೋಹರ್‌ಗೆ ಹತ್ತರಿವಾಗುತ್ತಿದ್ದಾರೆ ಅಂತ ಅಂದುಕೊಂಡೆ. ಆದರೆ ಆರ್ಯನ್ ಜೊತೆ ಹ್ಯಾಂಗ್ ಔಟ್ ಮಾಡುತ್ತಿದ್ದಾರೆ. ಪಾರ್ಟಿಯಲ್ಲಿ ನೋರಾ ಕೂಡ ಇದ್ದರು’ ಎಂದು ಹೇಳುತ್ತಿದ್ದಾರೆ.

ನೋರಾ ಫತೇಹಿ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕರಣ್ ಜೋಹರ್, ಸುಹಾನಾ ಖಾನ್ ಸೇರಿದಂತೆ ಅನೇಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಆರ್ಯನ್ ಕೂಡ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!