ರಾಜ್ಯ ರಾಜಧಾನಿಯಲ್ಲಿ ಕಳೆದ ವರ್ಷ ನಡೆದ ಕ್ರೈಂ ಗಳೆಷ್ಟು?: ಇಲ್ಲಿದೆ ಮಾಹಿತಿ…!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಅಪರಾಧ ಪ್ರಕರಣಗಳ ಕುರಿತು ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ. 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪರಾಧ ಪ್ರಕರಣಗಳು ಕಡೆಮೆಯಾಗಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೊದಲನೆಯದಾಗಿ ಡಿಸೆಂಬರ್ 31ರ ರಾತ್ರಿ ನಗರ ಪೊಲೀಸರಿಂದ ವ್ಯಾಪಕವಾಗಿ ಬಂದೂಬಸ್ತ್ ಮಾಡಲಾಗಿದೆ. ಯಾವುದೆ ಅನಾಹುತ ಆಗದಿರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ದೊಡ್ಡದಾಗಿತ್ತು ಎಂದರು.

ಅದೇ ರೀತಿ ಜಿ 20, ಪ್ರಧಾನ ಮಂತ್ರಿಗಳ ಭದ್ರತೆ, ಈದ್ಗಾ ಮೈದಾನ ಭದ್ರತೆ ಸೇರಿ ಹಲವಾರು ಭದ್ರತೆಗಳನ್ನು ಮಾಡಲಾಗಿದೆ. ಹಿಜಾಬ್, ವಿದ್ಯಾರ್ಥಿ, ಕಾರ್ಮಿಕರು ಹಾಗೂ ರೈತ ಸಂಘದ ಸಂಸ್ಥೆಗಳಿಂದ ಸುಮಾರು 500 ಹೆಚ್ಚು ಪ್ರತಿಭಟನೆಗಳು ನಡೆದಿದೆ. ನಗರಕ್ಕೆ ಎಂಟು ಮೊಬೈಲ್ ಎಫ್​ಎಸ್​ಎಲ್​ಗಳು ಕೆಲಸ ಮಾಡಿ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ ಅದು ಮತ್ತಷ್ಟು ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು.

ಅದೇ ರೀತಿ 2022ರಲ್ಲಿ 34 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ 172 ಕೊಲೆ ಕೇಸ್ ದಾಖಲಾಗಿದ್ದು ಎಲ್ಲ ಕೇಸ್​ಗಳು ಪತ್ತೆಯಾಗಿದೆ. 478 ದರೋಡೆ ಪ್ರಕರಣ ಪೈಕಿ 351 ಕೇಸ್ ಪತ್ತೆ ಮಾಡಲಾಗಿದೆ. 151 ಸರಗಳ್ಳತನ ಕೇಸ್ ಪೈಕಿ 134 ಕೇಸ್ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಗೂಂಡಾ ಕಾಯ್ದೆಯಡಿ 22 ರೌಡಿಗಳನ್ನು ಅರೆಸ್ಟ್ ಮಾಡಲಾಗಿದೆ. 179 ಹಗಲು ಮನೆಗಳ್ಳತನ ಕೇಸ್ ಗಳಲ್ಲಿ 70 ಪತ್ತೆಯಾಗಿದ್ದು, ಅದೇ ರೀತಿ 701 ರಾತ್ರಿ ಮನೆಗಳ್ಳತನ ಕೇಸ್​ ಪೈಕಿ 229 ಪತ್ತೆಯಾಗಿವೆ.

5,066 ವಾಹನ ಕಳ್ಳತನ ಪ್ರಕರಣ​ಗಳ ಪೈಕಿ 1,189 ಕೇಸ್ ಪತ್ತೆ, 2,511 ಕಳ್ಳತನ ಪ್ರಕರಣ ಪೈಕಿ 561 ಕೇಸ್ ಪತ್ತೆಯಾಗಿದೆ. ಒಟ್ಟು 9,281 ಕೇಸ್ ದಾಖಲಾಗಿದ್ದವುಈ ಪೈಕಿ 2,728 ಕೇಸ್​ಗಳು ಪತ್ತೆ ಮಾಡಲಾಗಿದೆ ಎಮದು ತಿಳಿಸಿದರು.

ರಾಜಧಾನಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಏರಿಕೆ ಆಗಿದ್ದು, 2021ಕ್ಕೆ ಹೋಲಿಸಿದ್ರೆ 2022ರಲ್ಲಿ 30 ಪರ್ಸೆಂಟ್ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಒಟ್ಟು 153 ಅತ್ಯಾಚಾರ ಕೇಸ್ ದಾಖಲಾಗಿದ್ದು, 153 ಅತ್ಯಾಚಾರ ಪ್ರಕರಣ ಪೈಕಿ 149 ಕೇಸ್ ಲವ್, ಮದುವೆ, ಲಿವ್ ಇನ್ ರಿಲೇಷನ್​ಶಿಪ್ ಮತ್ತು ಸಂಬಂಧಿಕರಿಂದ ಕೃತ್ಯಗಳು ನಡೆದಿವೆ. 4 ಅತ್ಯಾಚಾರ ಕೇಸ್​ನ ಆರೋಪಿಗಳನ್ನ ಬಂಧಿಸಿದ್ದೇವೆ.

ಒಟ್ಟು 579 ಡ್ರಗ್​ ಪೆಡ್ಲರ್ಸ್​​ ಬಂಧನ ಮಾಡಿದ್ದು, ಆರೋಪಿಗಳಿಂದ 3,746 ಕೆಜಿ ಗಾಂಜಾ, 167 ಕೆಜಿ ಡ್ರಗ್ಸ್, ಒಟ್ಟು 89.53 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ವಾಹನ ಸವಾರರಿಂದ 179 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!