ಬಾಲಿವುಡ್ ಆಂಗಳದಲ್ಲಿ ಮತ್ತೊಂದು ಮದುವೆ ಸುದ್ದಿ: ದಾಂಪತ್ಯ ಜೀವನಕ್ಕೆ ಕಿಯಾರಾ ಅಡ್ವಾನಿ-ಸಿದ್ಧಾರ್ಥ್ ಮಲ್ಹೋತ್ರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್​ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಕಾಫಿ ವಿತ್ ಕರಣ್’ ಶೋಗೆ ಹಲವು ಸೆಲೆಬ್ರಿಟಿಗಳು ಬಂದು ತಮ್ಮ ಜೀವನದ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹೇಳುತ್ತಾರೆ. ಅದೇ ರೀತಿ ಮುಂದಿನ ಸಂಚಿಕೆಯಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ, ನಟ ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದಾರೆ. ಈ ಶೋನ ಪ್ರೋಮೋ ರಿಲೀಸ್ ಆಗಿದ್ದು, ಇಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ವೈಯಕ್ತಿಕ ಜೀವನದ ಕುರಿತು ಚರ್ಚೆ ನಡೆಸಿದ್ದು,ಸಿದ್ಧಾರ್ಥ್ – ಕಿಯಾರಾ ಅಡ್ವಾನಿ ಲವ್ ಲೈಫ್ ಬಗ್ಗೆ ಗುಸು ಗುಸು ಹುಟ್ಟುಹಾಕಿದೆ.

ಈಗಾಗಲೇ ಬಾಲಿವುಡ್ ಆಂಗಳದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಜೋಡಿ ಲವ್ ಬರ್ಡ್ ಎಂದೇ ಕರೆಸಿಕೊಂಡಿದೆ. ಆದರೆ ಈ ಜೋಡಿ ಈವರೆಗೆ ಈ ಬಗ್ಗೆ ನೇರವಾಗಿ ಏನನ್ನೂ ಖಚಿತಪಡಿಸಿಲ್ಲ. ಈವರೆಗೂ ನಾವಿಬ್ಬರೂ ಉತ್ತಮ ಸ್ನೇಹಿತರೆಂದೇ ಹೇಳಿಕೊಂಡು ಬಂದಿದ್ದಾರೆ.
ಇದೀಗ ಮುಂದಿನ ಸಂಚಿಕೆ ಪ್ರೋಮೋ ವಿಡಿಯೋ ನೋಡಿದ್ರೆ ಈ ಸೆಲೆಬ್ರಿಟಿ ಜೋಡಿ ಮದುವೆಗೆ ಸಜ್ಜಾಗುತ್ತಿದ್ದಂತೆ ಕಾಣುತ್ತಿದೆ.

ಕರಣ್ ಅವರು ಸಿದ್ಧಾರ್ಥ್‌ ಅವರಿಗೆ ನೀವು ಈಗ ಕಿಯಾರಾ ಅಡ್ವಾಣಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ, ಭವಿಷ್ಯದ ಯೋಜನೆಗಳೇನಾದರೂ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಿದ್ಧಾರ್ಥ್ ಮುಗುಳ್ನಗುತ್ತಾರೆ. ಬಳಿಕ ನಾನು ಇಂದು ಅದನ್ನು ವ್ಯಕ್ತಪಡಿಸುತ್ತೇನೆ, ಉಜ್ವಲ ಮತ್ತು ಸಂತಸದ ಭವಿಷ್ಯವನ್ನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.

ಕರಣ್ ಜಾಣತನದಿಂದ ಹಾಗಾದ್ರೆ ನೀವು ಕಿಯಾರಾ ಅಡ್ವಾಣಿಯನ್ನು ಮದುವೆಯಾಗುತ್ತೀರಾ? ಎಂದು ಪ್ರಶ್ನಿಸಿರುವ ಈ ಪ್ರೋಮೋದ ವಿಡಿಯೋ ಈಗ ಸದ್ದು ಮಾಡುತ್ತಿದ್ದು, ಮುಂದಿನ ಸಂಪೂರ್ಣ ಸಂಚಿಕೆ ವೀಕ್ಷಣೆಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!