ಬಾಕ್ಸಿಂಗ್‌ ನಲ್ಲಿ ಮತ್ತೊಂದು ಪದಕ: ಚಿನ್ನ ಗೆದ್ದ ನಿಖತ್ ಜರೀನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಕ್ಸಿಂಗ್‌ ನ ವಿಶ್ವ ಚಾಂಪಿಯನ್ ನಿಖತ್ ಜರೀನ್ ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ 50 ಕೆಜಿ ಫ್ಲೈವೇಟ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇದು ನಿಖತ್ ಜರೀನ್ ಅವರ ಮೊದಲ ಕಾಮನ್‌ವೆಲ್ತ್ ಚಿನ್ನದ ಪದಕವಾಗಿದೆ. ಫೈನಲ್‌ನಲ್ಲಿ ಸರ್ವಾನುಮತದ ನಿರ್ಧಾರದ ಮೂಲಕ ಉತ್ತರ ಐರ್ಲೆಂಡ್‌ನ ಕಾರ್ಲಿ ಮೆಕ್‌ನಾಲ್ ಅವರನ್ನು ಮೀರಿಸಿದ ಜರೀನ್‌ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾಮನ್‌ ವೆಲ್ತ್‌ ನಲ್ಲಿ ಚಿನ್ನ ಗೆದ್ದ ನಿಖತ್‌ ಜರೀನ್‌ ಹ್ಯಾಟ್ರಿಕ್‌ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಅವರು 2 ನೇ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಪಂದ್ಯಾವಳಿ ಮತ್ತು ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದು ಸತತ ಅವರ ಮೂರನೇ ಚಿನ್ನದ ಪದಕವಾಗಿದೆ. ಮಹಿಳೆಯರ 50 ಕೆಜಿ ವಿಭಾಗದಲ್ಲಿ ಇಂಗ್ಲೆಂಡ್‌ನ ಸ್ಟಬ್ಲಿ ಅಲ್ಫಿಯಾ ಸವನ್ನಾ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಇದು CWG 2022 ರಲ್ಲಿ ಭಾರತದ ಆರನೇ ಬಾಕ್ಸಿಂಗ್ ಪದಕ ಮತ್ತು ಮೂರನೇ ಚಿನ್ನದ ಪದಕವಾಗಿದೆ, ಎರಡು ಬಾರಿ ಯುವ ವಿಶ್ವ ಚಾಂಪಿಯನ್ ನಿತು ಘಂಗಾಸ್ ಮತ್ತು ಅಮಿತ್ ಪಂಗಲ್ ಕೂಡ ತಮ್ಮ ಅಂತಿಮ ಪಂದ್ಯಗಳನ್ನು ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!