ಮೋದಿಗಾಗಿ ಹಾರೈಕೆ ಸಹಿತ ಹೊರಟಿದೆ ಪಾಕಿಸ್ತಾನಿ ಸಹೋದರಿ ಕಳುಹಿಸಿದ ರಾಖಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಸಹೋದರಿ ಕಮರ್ ಮೊಹ್ಸಿನ್ ಶೇಖ್ ರಾಖಿ ಕಳುಹಿಸಿಕೊಟ್ಟು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ರಾಖಿಯ ಜೊತೆಯಲ್ಲಿ ಪತ್ರವೊಂದನ್ನೂ ರವಾನಿಸಿರುವ ಅವರು, ಕಸೂತಿ ವಿನ್ಯಾಸದೊಂದಿಗೆ ರೇಶ್ಮಿ ರಿಬ್ಬನ್ ಬಳಸಿ ನಾನೇ ಈ ರಾಖಿಯನ್ನು ತಯಾರಿಸಿದ್ದೇನೆ. ಈ ಬಾರಿ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಮೋದಿ ಅವರು ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದಲ್ಲದೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ನನಗೆ ಯಾವುದೇ ಸಂದೇಹವಿಲ್ಲ, ಪ್ರಧಾನಿ ಪಟ್ಟಕ್ಕೆ ಅವರು ಅರ್ಹರು. ಅವರು ಪ್ರತಿ ಬಾರಿಯೂ ಭಾರತದ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಆಕೆ ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!