Tuesday, October 3, 2023

Latest Posts

ಏರ್ ಇಂಡಿಯಾದಲ್ಲಿ ಮತ್ತೆ ಎಡವಟ್ಟು, ಇಡ್ಲಿ ಸಾಂಬಾರ್ ಜೊತೆ ಜಿರಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾ ವಿಮಾನದಲ್ಲಿ ಊಟದ ವಿಷಯದಲ್ಲಿ ಮತ್ತೆ ಎಡವಟ್ಟಾಗಿದ್ದು, ಇಡ್ಲಿ ಸಾಂಬಾರ್ ಜೊತೆಗೆ ಸತ್ತ ಜಿರಳೆ ಸಿಕ್ಕಿದೆ.

ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವ ವೇಳೆ ಪ್ರಯಾಣಿಕರ ಬ್ರೇಕ್‌ಫಾಸ್ಟ್‌ನಲ್ಲಿ ಜಿರಳೆ ಸಿಕ್ಕಿದೆ. ಬೆಂಗಳೂರಿನ ಉದ್ಯಮಿ ಪ್ರವೀಣ್ ವಿಜಯ್ ಸಿಂಗ್ ಲೀಡ್ ಫ್ಲೈಟ್ ಅಟೆಂಡೆಂಟ್‌ನ್ನು ಕರೆದು ಜಿರಳೆಯನ್ನು ತೋರಿಸಿದ್ದಾರೆ. ಅದಕ್ಕೆ ಅದು ಜಿರಳೆ ಅಲ್ಲ ಕರಿಬೇವಿನಸೊಪ್ಪು ಎಂದು ವಾದಿಸಿದ್ದಾರೆ.

Bengaluru flyer finds cockroach on Air India meal Vinತದನಂತರ ಟಿಕೆಟ್ ಸಂಪೂರ್ಣ ರೀಫಂಡ್ ನೀಡುವುದಾಗಿಯೂ ಹೇಳಿದ್ದಾರೆ ಆದರೆ ಪ್ರವೀಣ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ನಾನು ಸಂಪೂರ್ಣ ಸಸ್ಯಾಹಾರಿ, ಇಡ್ಲಿ ಸಾಂಬಾರ್ ಹೇಳಿದ್ದೆ. ಒಂದು ತುತ್ತು ಬಾಯಿಗೆ ಇಟ್ಟಾಗ ಅಸಹ್ಯದಂಥ ಅನುಭವವಾಯ್ತು ತಕ್ಷಣವೇ ಅದನ್ನು ಉಗಿದುಬಿಟ್ಟೆ, ನೋಡಿದರೆ ಅದು ಜಿರಳೆ. ಫ್ಲೈಟ್ ಅಟೆಂಡೆಂಟ್ ಅದು ಕರಿಬೇವು, ತಿನ್ನಿ ಎಂದು ಹೇಳಿದ್ದಾರೆ. ದೂರು ದಾಖಲಿಸಲಉ ಎರಡು ಗಂಟೆ ಕಾದಿದ್ದೇನೆ ಎಂದಿದ್ದಾರೆ.

ಇತ್ತ ಏರ್ ಇಂಡಿಯಾ ಈ ಬಗ್ಗೆ ಕ್ಷಮೆಯಾಚಿಸಿದ್ದು, ಇನ್ನೆಂದೂ ಇಂಥ ಘಟನೆಗಳು ಮರುಕಳಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!