Sunday, October 1, 2023

Latest Posts

POSITIVE STORY| ಬೆಟ್ಟ-ಗುಡ್ಡ, ಕುಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗ್ತಿದೆ ‘ಕುದುರೆ ಗ್ರಂಥಾಲಯ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನಸ್ಸಿದ್ದರೆ ಮಾರ್ಗ ಕಂಡಿತಾ ಇರುತ್ತದೆ. ಸಮರ್ಪಣಾ ಮನೋಭಾವದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದನ್ನು ಈ ಯುವಕರು ಸಾಧಿಸಿ ತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೂರದ ಪ್ರದೇಶಗಳಲ್ಲಿಯೂ ಮೊಬೈಲ್ ನೆಟ್‌ವರ್ಕ್ ಇದೆ, ಆದರೆ ಶಿಕ್ಷಣ ಸೌಲಭ್ಯಗಳು ಇಲ್ಲ. ಆ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಕನಿಷ್ಠ ವೈದ್ಯಕೀಯ ಆರೈಕೆ ಮತ್ತು ಶಿಕ್ಷಣ ಸೌಲಭ್ಯಗಳು ಇಲ್ಲ. ಇವರೆಲ್ಲರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡ ಯುವಕರು ವಿನೂತನ ಪ್ರಯತ್ನಗಳೊದಿಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅವರ ಕಲ್ಪನೆಗಳ ರೂಪವೇ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಲಭ್ಯವಿರುವ ‘ಕುದುರೆ ಗ್ರಂಥಾಲಯ’.

ಕುದುರೆ ಎಂತಹ ದೊಡ್ಡ ಬೆಟ್ಟವನ್ನಾದರೂ ಸುಲಭವಾಗಿ ಏರುತ್ತದೆ. ಅದಕ್ಕಾಗಿಯೇ ಬೆಟ್ಟಗಳನ್ನು ಸಕ್ರಿಯವಾಗಿ ಏರುವ ಕುದುರೆಯನ್ನು ಮಕ್ಕಳಿಗೆ ಶಿಕ್ಷಣ ನೀಡಲು ಬಳಸಲಾಗುತ್ತಿತ್ತು. ಕುದುರೆ ಬೆನ್ನಿಗೆ ಪುಸ್ತಕಗಳನ್ನು ಕಟ್ಟಿ ಬೆಟ್ಟ-ಗುಡ್ಡ, ಕುಗ್ರಾಮಗಳಲ್ಲಿ ವಾಸಿಸುವ ಮಕ್ಕಳಿಗಾಗಿ ಕಳಿಸಲಾಗುತ್ತದೆ. ಅದಕ್ಕಾಗಿ ‘ಹಿಮೋತ್ತಹನ್’, ಸಂಕಲ್ಪ್ ಯೂತ್ ಫೌಂಡೇಶನ್ ಸಹಾಯ ಮಾಡಿದ್ದು, ಈ ‘ಘೋಡಾ ಗ್ರಂಥಾಲಯ’ ನೈನಿತಾಲ್ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಲಭ್ಯವಿದೆ.

ನೈನಿತಾಲ್ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ರಸ್ತೆಗಳಿಲ್ಲ. ಇದರ ಜತೆಗೆ ಬೇಸಿಗೆ ರಜೆಗೆ ಶಾಲೆಗಳನ್ನು ಮುಚ್ಚಲಾಗುತ್ತದೆ. ಆ ನಂತರ ಮಳೆ, ಭೂಕುಸಿತ ಮೊದಲಾದ ಕಾರಣಗಳಿಂದ ಶಾಲೆಗಳು ತೆರೆದಿರಲಿಲ್ಲ. ಇದರಿಂದ ಹಲವು ಗ್ರಾಮಗಳ ಮಕ್ಕಳು ಶಿಕ್ಷಣ ವಂಚಿತರಾಗಿದ್ದು, ಅವರಿಗಾಗಿ ‘ಹಿಮೋತ್ತಹನ್’, ಸಂಕಲ್ಪ್ ಯುವ ಪ್ರತಿಷ್ಠಾನವು ಈ ಕುದುರೆ ಗ್ರಂಥಾಲಯವನ್ನು ಸ್ಥಾಪಿಸಿದೆ.

ಈ ಗ್ರಂಥಾಲಯದಲ್ಲಿ ಸುಮಾರು 200 ಮಕ್ಕಳು ಪುಸ್ತಕಗಳನ್ನು ಪಡೆಯುತ್ತಿದ್ದಾರೆ. ತಲ್ಲಜಲನಾ, ಮಲ್ಲಜಲನಾ, ಮಲ್ಲಬಘಾನಿ, ಸಲ್ವಾ, ಬಘಾನಿ, ಜಲ್ನಾ, ಮಹಲ್ಧುರಾ, ಧಿನ್ವಾಖರಕ್, ಬದಂಧೂರ ಮುಂತಾದ ಗ್ರಾಮಗಳಿಗೆ ತೆರಳಲು ಹಲವಾರು ಬೆಟ್ಟ, ಅಂಕುಡೊಂಕಾದ ದಾರಿ, ಹೊಳೆಗಳನ್ನು ದಾಟಬೇಕು. ಅಂತಹ ಹಳ್ಳಿಗಳಲ್ಲಿ ಮಕ್ಕಳು ಕುದುರೆಯ ಮೂಲಕ ವಿವಿಧ ಪುಸ್ತಕಗಳನ್ನು ಸ್ವೀಕರಿಸುತ್ತಾರೆ.

ಆದ್ದರಿಂದ ಈ ವರ್ಷ (2023) 600 ಕ್ಕೂ ಹೆಚ್ಚು ಪುಸ್ತಕಗಳನ್ನು ಹಸ್ತಾಂತರಿಸಲಾಗಿದೆ. ಮಕ್ಕಳಿಗೆ ಅವರ ಆಸಕ್ತಿಗೆ ತಕ್ಕಂತೆ ಪುಸ್ತಕಗಳನ್ನು ಕಳುಹಿಸಲಾಗುತ್ತದೆ. ಯುವಕರ ಗುಂಪು ಮಕ್ಕಳಿಗೆ ಸಾಮಾನ್ಯ ಜ್ಞಾನ, ಪ್ರೇರಕ ಕಥೆಗಳು ಮತ್ತು ನೈತಿಕ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!