ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಎಂಬ ವೈರಸ್ ವೇಗವಾಗಿ ಹರಡುತ್ತಿದೆ. HMPV ಒಂದು RNA ವೈರಸ್ ಆಗಿದ್ದು, ಇದು ನ್ಯುಮೊವಿರಿಡೆ, ಮೆಟಾಪ್ನ್ಯೂಮೊವೈರಸ್ ಕುಲಕ್ಕೆ ಸೇರಿದೆ ಎಂದು ಹೇಳಲಾಗಿದೆ.
ಈ ವೈರಸ್ ಉಲ್ಬಣದಿಂದ ಚೀನಾದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮಿತಿ ಮೀರುತ್ತಿದೆ. ಹೀಗಾಗಿ ಚೀನಾದಲ್ಲಿ ಮೆಡಿಕಲ್ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. HMPV ಸೋಂಕಿಗೆ ಒಳಗಾದವರಲ್ಲಿ ಕೋವಿಡ್-19 ರ ಲಕ್ಷಣಗಳಂತೆಯೇ ಕಂಡುಬರುತ್ತಿದೆ.
ಡಚ್ ಸಂಶೋಧಕರು ಈ ವೈರಸ್ ಅನ್ನು 2001 ರಲ್ಲಿ ಪತ್ತೆ ಹಚ್ಚಿದ್ದರು. ಈ ವೈರಸ್ ಸುಮಾರು ಆರು ದಶಕಗಳಿಂದ ಉಳಿದುಕೊಂಡಿದೆ. ವೈರಸ್ ಹರಡುವುದನ್ನು ಆರೋಗ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದರಿಂದ ದೂರವಿರಲು ಕೋವಿಡ್ ಮಾದರಿಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಚೀನಾ ಈ ಕ್ರಮಕ್ಕೆ ಮುಂದಾಗಿದೆ.