ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ: ಚೀನಾದಿಂದ ಹೊಸ ವೈರಸ್ ಎಂಟ್ರಿ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಡೀ ವಿಶ್ವಕ್ಕೆ Covid-19 ಹಬ್ಬಿಸಿದ್ದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ​​ಪತ್ತೆಯಾಗಿದೆ. ಅದೂ ಸಹ ಕೊರೋನಾದಂತೆ ಬಾವಲಿಗಳಿಂದಲೇ ಹುಟ್ಟಿಕೊಂಡಿದ್ದು, ಮನುಷ್ಯರ ಮೇಲೂ ದಾಳಿ ಮಾಡಲಿದೆ ಅಂತಾ ಸಂಶೋಧಕರು ಎಚ್ಚರಿಸಿದ್ದಾರೆ.

ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP)ವರದಿ ಮಾಡಿದ್ದು, HKU5-CoV-2 ಎಂಬ ಹೊಸ ವೈರಸ್ ಅನ್ನು “ಬ್ಯಾಟ್‌ವುಮನ್” ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಕಂಡುಹಿಡಿದಿದೆ.

ಈ ಹೊಸ ವೈರಸ್ SARS CoV-2 ಗೆ ಹೋಲುತ್ತದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದು, ಇದು ಕೂಡ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್ ಎನ್ನಲಾಗಿದೆ. ಇದು ಕೋವಿಡ್ ಮಾಡಿದಂತೆಯೇ ACE2 ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಇಲ್ಲಿಯವರೆಗೆ HKU5-CoV-2 ಮನುಷ್ಯರಿಗೆ ಹಬ್ಬಿಲ್ಲ.

ಬಾವಲಿ ಕೊರೋನಾ ವೈರಸ್​ ಬಗ್ಗೆ ಅಧ್ಯಯ ನಡೆಸಿದ್ದ ‘ಬ್ಯಾಟ್‌ವುಮನ್’ (batwoman) ಎಂದು ಕರೆಯಲ್ಪಡುವ ಪ್ರಸಿದ್ಧ ವೈರಾಲಜಿಸ್ಟ್ ಶಿ ಝೆಂಗ್ಲಿ (Shi Zhengli) ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಜೊತೆಗೆ ಸಂಸ್ಥೆಗಳ ತಜ್ಞರು ಕೂಡ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಪತ್ತೆಯಾದ ಹೊಸ ವೈರಸ್ ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದೆ. ಹಾಂಗ್ ಕಾಂಗ್‌ನಲ್ಲಿರುವ ಜಪಾನಿ ಪೈಪಿಸ್ಟ್ರೆಲ್ ಬಾವಲಿಗಳಲ್ಲಿ ಪತ್ತೆಯಾಗಿದ್ದ HKU5 ಕೊರೊನಾ ವೈರಸ್‌ನ ಹೊಸ ವಂಶಾವಳಿ. ಬಾವಲಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್​, ಮನುಷ್ಯರಿಗೂ ತಾಗುವ ಅಪಾಯವಿದೆ.

ಇನ್ನು ಹೊಸ ವೈರಸ್ ಪತ್ತೆ ಬೆನ್ನಲ್ಲೇ ಇದೀಗ ಈ ಹಿಂದೆ ವುಹಾನ್ ಇನ್‌ಸ್ಟಿಟ್ಯೂಟ್‌ನಲ್ಲಿ, COVID-19 ಪ್ರಯೋಗಾಲಯದ ಸೋರಿಕೆಯಲ್ಲಿ ಇದ್ದ ವೈರಸ್ ಇದೇನಾ ಎಂಬ ಪ್ರಶ್ನೆ ಕೂಡ ಉದ್ಙವವಾಗಿದೆ. ಅಂತೆಯೇ ಈ ವೈರಸ್ ಇದೀಗ ಸೋರಿಕೆ ಸಿದ್ಧಾಂತದ ಕೇಂದ್ರಬಿಂದುವಾಗಿದೆ. ಆದರೆ ಚೀನಾ ಸರ್ಕಾರ ಮಾತ್ರ ಈ ಸೋರಿಕೆ ಸಿದ್ಧಾಂತವನ್ನು ಅಲ್ಲಗಳೆಯುತ್ತಲೇ ಬಂದಿತ್ತು.

ಪ್ರಯೋಗಾಲಯದ ಪ್ರಯೋಗಗಳಲ್ಲಿ, HKU5-CoV-2 ಪರೀಕ್ಷಾ ಕೊಳವೆಗಳಲ್ಲಿ ಮತ್ತು ಮಾನವ ಕರುಳುಗಳು ಮತ್ತು ವಾಯುಮಾರ್ಗಗಳ ಮಾದರಿಗಳಲ್ಲಿ ಹೆಚ್ಚಿನ ACE2 ಮಟ್ಟಗಳನ್ನು ಹೊಂದಿರುವ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸಿತು. ಸಂಶೋಧಕರು ಬ್ಯಾಟ್ ವೈರಸ್ ಅನ್ನು ಗುರಿಯಾಗಿಸುವ ಮೊನೊಕ್ಲೋನಲ್ ಪ್ರತಿಕಾಯಗಳು ಮತ್ತು ಆಂಟಿವೈರಲ್ ಔಷಧಿಗಳನ್ನು ಸಹ ಗುರುತಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!