Saturday, April 1, 2023

Latest Posts

SHOCKING | ಪಾಕ್‌ಗೆ ಮತ್ತೊಂದು ಸಮಸ್ಯೆ : ನಿಗೂಢ ಕಾಯಿಲೆಗೆ 14 ಮಕ್ಕಳು ಸೇರಿ 18 ಜನರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ತ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದ ಪಾಕಿಸ್ತಾನದಲ್ಲಿ, ಆರ್ಥಿಕ ಬಿಕ್ಕಟ್ಟೂ ಎದುರಾಗಿದೆ. ಇದೀಗ ಮತ್ತೊಂದು ಸಮಸ್ಯೆ ಎದುರಾಗಿದ್ದು, ಪಾಕಿಸ್ತಾನದಲ್ಲಿ ನಿಗೂಢ ಕಾಯಿಲೆಗೆ 18 ಮಂದಿ ಬಲಿಯಾಗಿದ್ದಾರೆ.

ಕರಾಚಿಯ ಕೆಮರಿನಲ್ಲಿ ನಿಗೂಢ ಕಾಯಿಲೆ ಕಾಣಿಸಿದ್ದು, ಜನವರಿ 10-15ರ ಒಳಗೆ 18 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಕೆಮರಿಯ ಮೇವಕ್ ಗೋತ್ ಪ್ರದೇಶದವರಾಗಿದ್ದಾರೆ.

ಈವರೆಗೂ ಯಾವ ಕಾಯಿಲೆ ಎನ್ನುವುದು ತಿಳಿದಿಲ್ಲ. ಕರಾವಳಿ ಪ್ರದೇಶಕ್ಕೆ ಗೋತ್ ಗ್ರಾಮ ಹತ್ತಿರದಲ್ಲೇ ಇದೆ, ಇದು ಕೊಳಗೇರಿ ಪ್ರದೇಶವಾಗಿದೆ. ಹಾಗಾಗಿ ನೀರಿನಿಂದ ಅಥವಾ ಸಮುದ್ರದಿಂದ ಕಾಯಿಲೆ ಹರಡಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಅಬ್ದುಲ್ ಹಮೀದ್ ಹೇಳಿದ್ದಾರೆ.

ಗೋತ್ ಪ್ರದೇಶದಲ್ಲಿ ಸಾವು ಸಂಭವಿಸುವ ಮೊದಲೇ ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ನಿವಾಸಿಗಳು ದೂರು ದಾಖಲಿಸಿದ್ದರು. ವಿಪರೀತ ಜ್ವರ, ಗಂಟಲು ಊತ, ಉಸಿರಾಟದ ತೊಂದರೆ ಈ ಕಾಯಿಲೆಯ ಲಕ್ಷಣಗಳಾಗಿವೆ.

ಈ ಬಗ್ಗೆ ಸುತ್ತಮುತ್ತಲು ಇರುವ ಕಾರ್ಖಾನೆಗಳ ಮಾದರಿ, ಸಮುದ್ರದ ನೀರಿನ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!