Saturday, April 1, 2023

Latest Posts

ಹಿಂಡೆನ್‌ಬರ್ಗ್ ವರದಿ ಹಿನ್ನೆಲೆ- 3 ತಿಂಗಳ ಕನಿಷ್ಟ ಮಟ್ಟ ತಲುಪಿವೆ ಅದಾನಿ ಶೇರುಗಳು, 3.22 ಲಕ್ಷ ಕೋಟಿ ರೂ. ನಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮೆರಿಕದ ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್‌ ವರದಿಯೊಂದು ಬಹುಕೋಟಿ ಸಾಮ್ರಾಜ್ಯ ಅದಾನಿ ಸಮೂಹದ ಪಾಲಿಗೆ ಶಾಪವಾಗಿ ಪರಿಣಮಿಸಿದಂತೆ ತೋರುತ್ತಿದೆ. ಅದಾನಿ ಸಮೂಹದ ಏಳು ಅಂಗಸಂಸ್ಥೆಗಳು ಗಣನೀಯ ಸಾಲವನ್ನು ಹೊಂದಿದ್ದು ಇಡು ಇಡೀ ಸಮೂಹದ ಪಾಲಿಗೆ ಆರ್ಥಿಕ ಅನಿಶ್ಚಿತತೆಯನ್ನು ಉಂಟು ಮಾಡುತ್ತದೆ ಎಂದು ಹಿಂಡೆನ್‌ ಬರ್ಗ್‌ ವರದಿ ಹೇಳಿತ್ತು. ಇದರ ಹಿನ್ನೆಲೆಯಲ್ಲೆ ಅದಾನಿ ಸಮೂಹದ ಶೇರುಗಳು ಶುಕ್ರವಾರ ಭಾರೀ ಪ್ರಮಾಣದಲ್ಲಿ ಕುಸಿದಿದ್ದು ಮೂರು ತಿಂಗಳ ಕನಿಷ್ಟ ಮಟ್ಟವನ್ನು ತಲುಪಿವೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಈ ಕುಸಿತದಿಂದಾಗಿ ಅದಾನಿಯವರ ಒಟ್ಟೂ ಆಸ್ತಿಯಲ್ಲಿ ಬರೋಬ್ಬರಿ 22.6 ಶತಕೋಟಿ ಡಾಲರುಗಳಷ್ಟು ಕುಸಿತವುಂಟಾಗಿದೆ. ಅವರ ಕಂಪನಿಗಳು ಸುಮಾರು 3.22 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ.

ಅದಾನಿ ಗ್ರೀನ್‌ ಎನರ್ಜಿ 20ಶೇಕಡಾ ಕುಸಿದು 58 ಸಾವಿರ ಕೋಟಿ ರೂಪಾಯಿಗೂ ಅಧಿಕ ಮಾರುಕಟ್ಟೆ ಬಂಡವಾಳ ಕಳೆದುಕೊಂಡಿದ್ದರೆ ಅದಾನಿ ಟೋಟಲ್‌ ಗ್ಯಾಸ್‌ 20 ಶೇಕಡಾ ಕುಸಿದು 80 ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ. ಅಂಬುಜಾ ಸಿಮೆಂಟ್‌ 17.33 ಶೇಕಡಾ ಕುಸಿದಿದ್ದರೆ ಅದಾನಿ ಪೋರ್ಟ್ಸ್‌ & SEZ ಶೇರುಗಳು 16.29 ಶೇಕಡಾ ಕುಸಿದಿದೆ. ಅದಾನಿ ಎಂಟರ್‌ಪ್ರೈಸಸ್‌ 18 ಶೇಕಡಾ ಕುಸಿದು 71 ಸಾವಿರ ಕೋಟಿ ರೂ ನಷ್ಟ ಅನುಭವಿಸಿದೆ. ಇನ್ನು ಎಸಿಸಿ, ಅದಾನಿ ವಿಲ್ಮಾರ್‌, ಅದಾನಿ ಪವರ್‌ ಶೇರುಗಳೂ ಕೂಡ ಭಾರೀ ಕುಸಿತ ದಾಖಲಿಸಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕವು ಗುರುವಾರದ ಹೊತ್ತಿಗೆ ಅದಾನಿಯವರ ಸಂಪತ್ತನ್ನು 113 ಬಿಲಿಯನ್‌ ಡಾಲರ್‌ ಗೆ ನಿಗದಿಪಡಿಸಿದರೆ, ಫೋರ್ಬ್ಸ್‌ನ ನೈಜ-ಸಮಯದ ಬಿಲಿಯನೇರ್‌ಗಳ ಪಟ್ಟಿಯು 22.6 ಶತಕೋಟಿ ಡಾಲರ್ ಕುಸಿತದ ನಂತರ ಅದಾನಿಯವರ ಸಂಪತ್ತು 96.6 ಶತಕೋಟಿ ಡಾಲರ್‌ ಗೆ ಕುಸಿದಿದೆ ಎಂದು ತೋರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!