ರಣಜಿ ಕ್ರಿಕೆಟ್​ ಟ್ರೋಫಿಯಲ್ಲಿ ಮತ್ತೊಂದು ದಾಖಲೆ: ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಜೈ ಗೋಹಿಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಣಜಿ ಕ್ರಿಕೆಟ್​ ಟ್ರೋಫಿಯಲ್ಲಿ ಬುಧವಾರ ಗೋವಾ ಪರ ಚೊಚ್ಚಲ ಪಂದ್ಯವನ್ನಾಡಿದ ಅರ್ಜುನ್​ ತೆಂಡೂಲ್ಕರ್​ ಶತಕ ಸಿಡಿಸಿ ಮಿಂಚಿದ್ದ ಬೆನಲ್ಲೇ, ಇದೀಗ ಸೌರಾಷ್ಟ್ರದ ಆಟಗಾರ ಜೈ ಗೋಹಿಲ್ ತಮ್ಮ ಮೊದಲ ಪಂದ್ಯದಲ್ಲೇ ದ್ವಿಶತಕ ಬಾರಿಸಿ ಅದ್ಭುತ ಸಾಧನೆ ಮಾಡಿದ್ದಾರೆ.
ಅಸ್ಸಾಂನ ಎಸಿಎ ಸ್ಟೇಡಿಯಂನಲ್ಲಿ ನಡೆದ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜೈ ಗೋಹಿಲ್ 246 ಎಸೆತಗಳಲ್ಲಿ 227 ರನ್ ಗಳಿಸಿ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯ ಗೊಳಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಜೈ ಗೋಹಿಲ್ ಹೊರತಾಗಿ ತಂಡದ ಮತ್ತೊಬ್ಬ ಆಟಗಾರ ಹಾರ್ವಿಕ್ ದೇಸಾಯಿ ಕೂಡ (108 ರನ್‌) ಅದ್ಭುತ ಬ್ಯಾಟಿಂಗ್​ ಮೂಲಕ ಶತಕ ಬಾರಿಸಿ ಮಿಂಚಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!