ಮಲ್ಪೆ ಪಡುಕೆರೆ ಕಡಲ ತೀರದಲ್ಲಿ ಭರದಿಂದ ಸಾಗುತ್ತಿದೆ ವಶಿಷ್ಠ ಅಭಿನಯದ ‘ಲವ್ ಲಿ’ ಸಿನಿಮಾ ಶೂಟಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಿಂಹ ಘರ್ಜನೆಯ ಧ್ವನಿಯ ಮೂಲಕ ಖಳನಾಯಕನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ನಟ ವಶಿಷ್ಠ ಸಿಂಹ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಅಭುವನಸಾ ಕ್ರಿಯೇಶನ್ ಅವರ ಬ್ಯಾನರ್ ಅಡಿಯಲ್ಲಿ ಲವ್ ಲಿ ಕನ್ನಡ ಸಿನೆಮಾ ಸೆಟ್ಟೇರಿದ್ದು, ಉಡುಪಿ ಜಿಲ್ಲೆಯ ಮಲ್ಪೆ ಪಡುಕೆರೆ ಕಡಲ ತೀರದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಗುರುವಾರ ಪಡುಕೆರೆ ಕಡಲತೀರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಶಿಷ್ಟ ಸಿಂಹ, ನೈಜ ಘಟನೆಯಾಧರಿತ ಸಿನೆಮಾ ಇದಾಗಿದ್ದು, ಜಯ್ ಎಂಬ ಪಾತ್ರವನ್ನು ಮಾಡುತ್ತಿದ್ದೇನೆ. ಚಿತ್ರವು 8-10 ಭಾವನೆಗಳನ್ನು ಒಟ್ಟಿಗೆ ಕರೆದೊಯ್ಯುವ ಕಥೆಯನ್ನು ಹೊಂದಿದೆ.

ಈ ಸಿನೆಮಾವನ್ನು ಮಫ್ತಿ ಚಿತ್ರದಲ್ಲಿ ಸಹನಿರ್ದಶಕರಾಗಿದ್ದ ಚೇತನ್ ಕೇಶವ್ ನಿರ್ದೇಶಿಸುತ್ತಿದ್ದಾರೆ. ರೌಡಿಸಂ, ಲವ್, ಫ್ಯಾಮಿಲಿ ಸೆಂಟಿಮೆಂಟ್, ಎಡ್ವೆಂಚರ್, ಥ್ರಿಲ್ ಹೀಗೆ ಎಲ್ಲಾ ಜಾನರ್ ಗಳನ್ನು ಈ ಸಿನೆಮಾ ಒಳಗೊಂಡಿದ್ದು, ಇದು ಕನ್ನಡದ ಸಿನೆಮಾ, ನಮ್ಮ ಸಿನೆಮಾ ಎಂದು ಹೇಳಿಕೊಳ್ಳುವ ಸಿನೆಮಾವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.


ನನಗೆ ಹೀರೋ, ವಿಲನ್ ಅಂತೇನಿಲ್ಲ, ನಾನೊಬ್ಬ ಕಲಾವಿದ ಮಾತ್ರ, ವಿಲನ್ ಪಾತ್ರಕ್ಕೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ, ಆದ್ದರಿಂದ ನೆಗೆಟಿವ್ ಶೇಡ್ ಗಳೇ ಇಷ್ಟ ಎಂದರು.

ನಿರ್ದೇಶಕರು ಕೊರೆಯುವ ಚಳಿಯಲ್ಲಿ ಮಧ್ಯರಾತ್ರಿ ತಮ್ಮನ್ನು ಸಮುದ್ರಕ್ಕೆ ತಳ್ಳಿ ಶೂಟಿಂಗ್ ಮಾಡುತ್ತಿದ್ದಾರೆ. ಮೊನ್ನೆ ಹರಿಪ್ರಿಯ ಜೊತೆಗೆ ಎಂಗೇಜ್ ಮೆಂಟ್ ಗೆ 2 ದಿನ ಮಾತ್ರ ರಜೆ ನೀಡಿದ್ದರು, ಇನ್ನೆರಡು ದಿನ ರಜೆ ಕೊಡು, ಆಯಾಗಿ ಸುತ್ತಾಡಿ ಬರುತ್ತೇನೆ ಎಂದರು, ಬಿಡ್ಲಿಲ್ಲ, ಕಳ್ ನನ್ಮಗ ಎಂದು ನಗುತ್ತಾ ನಿರ್ದೇಶಕನ ಕಾಲೆಳೆದರು.

ನಾಯಕಿ ಸ್ಟಫಿ ಪಟೇಲ್ ಕನ್ನಡದಲ್ಲಿ ಮಾತು ಆರಂಭಿಸಿ, ಹಿಂದಿ, ತೆಲುಗು, ತಮಿಳು ಸಿನೆಮಾಗಳಲ್ಲಿ ಹಾಗು ವೆಬ್ ಸೀರಿಸ್ ನಲ್ಲಿ ನಟಿಸಿದ್ದೇನೆ ಎಂದರು.

ನಿರ್ಮಾಪಕ ರವೀಂದ್ರ ಮತ್ತು ಸಹ ನಿರ್ಮಾಪಕ ಬಾಲಕೃಷ್ಣ ಜಿ.ಎನ್ ಅವರಿಗೆ ಇದು 2ನೇ ಸಿನೆಮಾ. ಯುನಿವರ್ಸಲ್ ಕತೆಯನ್ನು ಸಿನೆಮಾ ಮಾಡುತಿದ್ದೇವೆ, ಇದನ್ನು ಇಡೀ ಕನ್ನಡ ಇಂಡಸ್ಟ್ರಿ ನೋಡುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಸಿನೆಮಾಟೋಗ್ರಾಫಿಯನ್ನು ಅಶ್ವಿನ್ ಕೆನಡಿ, ಕಲಾನಿರ್ದೇಶಕ ಪ್ರತಾಪ್, ಸಂಗೀತ ಅನುಪ್, ಸಂಕಲನವನ್ನು ಹರೀಶ್ ಕೊಮ್ಮೆ ಮಾಡಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!