ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಗೆ ಮತ್ತೆ ಶಾಕ್ ಎದುರಾಗಿದ್ದು, ಮತ್ತೋರ್ವ ಹಿರಿಯ ನಾಯಕ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಸುಳ್ಯ ಕ್ಷೇತ್ರದ ಟಿಕೆಟ್ ಕೈತಪ್ಪಿ ನಂತರ ಸಕ್ರಿಯ ರಾಜಕಾರಣಕ್ಕೆ ಸಚಿವ ಎಸ್. ಅಂಗಾರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜತೆಗೆ ಚುನಾವಣಾ ಪ್ರಚಾರದಲ್ಲೂ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ನನಗೆ ಯಾವುದೇ ಅಸಮಾಧಾನ ಇಲ್ಲ. ಕಪ್ಪು ಚುಕ್ಕಿ ಇಲ್ಲದಂತೆ ಪಕ್ಷಕ್ಕಾಗಿ, ಜನಸೇವೆಗಾಗಿ ದುಡಿದಿದ್ದೇನೆ.
ಪ್ರಾಮಾಣಿಕ ರಾಜಕಾರಣಕ್ಕೆ ಯಾವ ಬೆಲೆಯೂ ಇಲ್ಲ.ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡಲು ಬಾರದ್ದೇ ತೊಂದರೆಯಾಗಿದೆ. ಇನ್ನು ರಾಜಕಾರಣದಲ್ಲಿ ನಾನಿರುವುದಿಲ್ಲ. ಚುನಾವಣಾ ಪ್ರಚಾರಕ್ಕೂ ಬರುವುದಿಲ್ಲ. ಹೊಸ ಅಭ್ಯರ್ಥಿ ಹಾಗೂ ಅವರ ಗೆಲುವಿನ ಬಗ್ಗೆ ಪಕ್ಷ ಚಿಂತಿಸುತ್ತದೆ ಎಂದಿದ್ದಾರೆ.