ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ:
1ಹಿಡಿ ತಿಮರೆ, 4-5 ಹಸಿಮೆಣಸು, ಅರ್ಧ ಹೋಳು ತೆಂಗಿನಕಾಯಿ, ಸಣ್ಣ ತುಂಡು ಬೆಲ್ಲ, ಶುಂಠಿ, ಉಪ್ಪು.
ಮಾಡುವ ವಿಧಾನ:
ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಬೇಕು. ಬೆಲ್ಲ ಸೇರಿಸದೆ ಸಾರು ಮಾಡಬಹುದು. ಸಾರಿಗೆ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ. ಒಂದೆಲಗವನ್ನು ಸಣ್ಣಗೆ ಹೆಚ್ಚಿ, ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯುವುದೂ ಉತ್ತಮ. ತಿಮರೆ, ಹಸಿಮೆಣಸು, ಶುಂಠಿ ಹಾಕಿ ರುಬ್ಬಿ ಅದರ ರಸವನ್ನು ಮಜ್ಜಿಗೆಗೆ ಸೇರಿಸಿಯೂ ಕುಡಿಯಬಹುದು. ಇದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಇದರಲ್ಲಿ ಮಿಟಮಿನ್, ಕಬ್ಬಿಣಾಂಶ, ಪ್ರೋಟಿನ್ ಅಧಿಕವಾಗಿದೆ.