SHOCKING | ಬಾಲಿವುಡ್‌ಗೆ ಮತ್ತೊಂದು ಆಘಾತ, ಹೃದಯಾಘಾತದಿಂದ ಖ್ಯಾತ ಕಿರುತೆರೆ ನಟ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಕಿರುತೆರೆಗೆ ಮತ್ತೊಂದು ಆಘಾತವಾಗಿದ್ದು, ಹಿರಿಯ ಖ್ಯಾತ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಿರುತೆರೆಯಷ್ಟೇ ಅಲ್ಲದೆ ಸಾಕಷ್ಟು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದ ನಿತೇಶ್ ಹೊಟೇಲ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನಾಸಿಕ್‌ನ ಇಗತ್‌ಪುರಿಯ ಹೊಟೇಲ್‌ನಲ್ಲಿ ನಿತೀಶ್ ಮೃತದೇಹ ಪತ್ತೆಯಾಗಿದ್ದು,ಮೇಲ್ನೋಟಕ್ಕೆ ಹೃದಯಾಘಾತದಂತೆ ಕಾಣಿಸುತ್ತಿದೆ. ಪೊಲೀಸರು ಹೊಟೇಲ್‌ಗೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಲಾಗಿದೆ.

ಹೊಟೇಲ್ ಸಿಬ್ಬಂದಿ ಹಾಗೂ ಅವರ ಆಪ್ತರ ವಿಚಾರಣೆ ನಡೆಸಲಾಗುತ್ತಿದೆ. ನಿತೇಶ್ ನಿಧನದಿಂದ ಬಾಲಿವುಡ್ ಶಾಕ್‌ನಲ್ಲಿದ್ದು, ಸಂತಾಪ ಸೂಚಿಸುತ್ತಿದೆ. ಟಿವಿಯ ಖ್ಯಾತ ಧಾರಾವಾಹಿಗಳಾದ ಅನುಪಮಾ, ಪ್ಯಾರ್ ಕಾ ದರ್ದ್, ಮೀಟಾ ಮೀಟಾ ಪ್ಯಾರಾ ಪ್ಯಾರಾ ಧಾರಾವಾಹಿಯಲ್ಲಿ ನಿತೇಶ್ ನಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!