Tuesday, May 30, 2023

Latest Posts

SHOCKING VIDEO| ಮನೆಯ ಹೊರಗೆ ಒಬ್ಬರೇ ಕೂರುತ್ತೀರಾ? ಎಷ್ಟು ಅಪಾಯಕಾರಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನಕಳೆದಂತೆ ಮನುಷ್ಯರಲ್ಲಿ ಮಾನವೀಯತೆ ಭಾವನೆ ಸತ್ತು ಹೋಗಿದೆ. ರಾತ್ರಿ ಮಾತ್ರವಲ್ಲ, ಹಗಲು ಹೊತ್ತಿನಲ್ಲಿಯೂ ಖದೀಮರು ದರೋಡೆಗಿಳಿಯುತ್ತಿದ್ದಾರೆ. ಮೈ-ಕೈ ದಷ್ಟಪುಷ್ಟವಾಗಿದ್ದರೂ ದುಡಿದು ತಿನ್ನದ ಕಂಡ ಕಂಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅದರಲ್ಲೂ ಒಂಟಿಯಾಗಿರುವವರೇ ಇವರ ಟಾರ್ಗೆಟ್.‌ ಪಾರ್ಕ್‌, ಸಿನಿಮಾ ಹಾಲ್‌, ಬಸ್ಟಾಂಡ್‌ ಇವೆಲ್ಲದರ ಜೊತೆಗೆ ನಮ್ಮ ಮನೆ ಬಳಿ ಕೂಡ ಕೂರು ಹಾಗಿಲ್ಲ ಅಂತಹ ಪರಿಸ್ಥಿತಿ ಬಂದೊದಗಿದೆ. ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದಾರೆ.

ಗೋವಾದ ಲೊಟೌಲಿಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೃದ್ಧೆ ತನ್ನ ಮನೆಯ ಹೊರಗಿನ ಬೆಂಚಿನ ಮೇಲೆ ಕುಳಿತಿದ್ದಾಳೆ. ಹಾಡಹಗಲೇ ನಿರ್ಜನ ಪ್ರದೇಶದಲ್ಲಿ ಕುಳಿತಿದ್ದ ಅಲ್ಲಿಗೆ ಬಂದ ದರೋಡೆಕೋರರು ಹಲ್ಲೆ ನಡೆಸಿ ಚಿನ್ನದ ಬಳೆಗಳನ್ನು ಕದ್ದೊಯ್ದಿದ್ದಾರೆ.

ವೃದ್ಧೆ ತನ್ನ ಬಳೆ ಉಳಿಸಿಕೊಳ್ಳಲು ಗಟ್ಟಿಯಾಗಿ ಕಿರುಚಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಮತ್ತೊಬ್ಬ ಬೈಕ್‌ ಸವಾರ ಅದೇ ರಸ್ತೆಯಲ್ಲಿ ಹಾದು ಹೋದರೂ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಮುನ್ನಡೆದಿದ್ದಾನೆ. ಈ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಗಲು ಹೊತ್ತಿನಲ್ಲಿ ನಡೆದಿರುವ ಈ ದರೋಡೆ ದಂಧೆ ಸ್ಥಳದಲ್ಲಿ ಸಂಚಲನ ಮೂಡಿಸಿದೆ. ಈ ಘಟನೆಯಿಂದ ಮನೆಯ ಹೊರಗೆ ಒಂಟಿಯಾಗಿ ಕುಳಿತುಕೊಳ್ಳುವವರು ಎಚ್ಚರಿಕೆಯಿಂದಿರಿ ಎಂದು ಪೊಲೀಸರು ಸೂಚಿಸಿದ್ದಾರೆ.

https://twitter.com/i/status/1660539109205499904

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!