ಬಾಯ್ಕಾಟ್ ಬಿಸಿ ನಡುವೆ ಬರಲಿದೆ ‘ಪಠಾಣ್​’ ಸಿನಿಮಾದ ಮತ್ತೊಂದು ಹಾಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ಶಾರುಖ್​ ಖಾನ್ ಅಭಿನಯದ ‘ಪಠಾಣ್​’ ಸಿನಿಮಾ ವಿರುದ್ಧ ಈಗಾಗಲೇ ದೇಶ ವ್ಯಾಪ್ತಿ ಭಾರೀ ಆಕ್ರೋಶಗಳು ಕೇಳಿಬರುತ್ತಿದ್ದು, ಅದ್ರಲ್ಲೂ ಸಿನಿಮಾದ ‘ಬೇಷರಂ ರಂಗ್​..’ ಹಾಡು ವಿರುದ್ಧ ನಾನಾ ರೀತಿಯಲ್ಲಿ ವಿರೋಧಗಳು ವ್ಯಕ್ತವಾಗುತ್ತಿದೆ.

ಇದರ ನಡುವೆ ಆ ‘ಪಠಾಣ್​’ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಎರಡನೇ ಹಾಡಿನ ಮೂಲಕ ರಂಜಿಸಲು ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಸಜ್ಜಾಗಿದ್ದಾರೆ.

‘ಜೂಮೇ ಜೋ ಪಠಾಣ್​..’ ಎಂಬ ಈ ಸಾಂಗ್​ ಇದೀಗ ಹೇಗೆ ಮೂಡಿಬಂದಿದೆ, ಜನರು ಹೇಗೆ ಸ್ವೀಕರಿಸುತ್ತಾರೋ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ.

ಯಾಕೆಂದರೆ ಮೊದಲ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಬಿಕಿನಿ ಬಗ್ಗೆ ತಕಾರಾರು ವ್ಯಕ್ತವಾಯಿತು. ಜೊತೆಗೆ ಎಲ್ಲೆಡೆ ಆಕ್ರೋಶಗಳು ಹೆಚ್ಚಾಯಿತು. ಇದರ ನಡುವೆ ಈಗ ಎರಡನೇ ಹಾಡು ಅಭಿಮಾನಿಗಳಿಗೆ ಇಷ್ಟಾಗುತ್ತಾ ಇಲ್ಲವೇ ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!