ಸ್ಮೃತಿ ಇರಾನಿ ಕುರಿತು ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್‌ ನಾಯಕನಿಗೆ ಸಮನ್ಸ್ ನೀಡಿದ ಮಹಿಳಾ ಆಯೋಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಸ್ವಕ್ಷೇತ್ರವಾದ ಅಮೇಠಿಗೆ ಕೇವಲ ‘ಲಟ್ಕಾ’ ಮತ್ತು ‘ಝಟ್ಕಾ’ (ನೃತ್ಯ ಪ್ರದರ್ಶನ) ಮಾಡಲು ಬರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಅಜಯ್‌ ರಾವ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಮಂಗಳವಾರ ಅಜಯ್ ರೈ ಗೆ ಸಮನ್ಸ್ ನೀಡಿದೆ.

ಡಿ. 28 ರಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಅಜಯ್ ರೈ ಗೆ ಸಮನ್ಸ್ ನೀಡಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅಮೇಠಿಯಿಂದ ಸ್ಪರ್ಧಿಸಿ ಜಯಗಳಿಸಲಿದ್ದಾರೆ. ಇದು ಕಾಂಗ್ರೆಸ್‌ನ ಸ್ವಕ್ಷೇತ್ರವಾಗಿದೆ. ಪ್ರಸ್ತುತ ಇಲ್ಲಿನ ಸಂಸದೆಯಾಗಿರುವ ಸ್ಮೃತಿ ಜನರ ಕಷ್ಟ ಕೇಳಲು ಬರದೇ ಕೇವಲ ನೃತ್ಯ ಪ್ರದರ್ಶನಕ್ಕಾಗಿ ಇಲ್ಲಿದೆ ಬರುತ್ತಾರೆ ಎಂದು ರೈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಎಲ್ಲೆಡೆ ತ್ರೀವ ವಿರೋಧ ವ್ಯಕ್ತವಾಗಿದ್ದು,ರಾಷ್ಟ್ರೀಯ ಮಹಿಳಾ ಆಯೋಗವು ಈ ಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಯ್ ಮಾಡಿದ ಸ್ತ್ರೀದ್ವೇಷದ ಹೇಳಿಕೆಯನ್ನು ಆಯೋಗವು ಅರಿತುಕೊಂಡಿದೆ. ಟೀಕೆಗಳು ಅತಿರೇಕದ ಮತ್ತು ಅತ್ಯಂತ ಅವಹೇಳನಕಾರಿಯಾಗಿದೆ ಮತ್ತು ಆಯೋಗವು ಅಂತಹ ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!