ರಷ್ಯಾಕ್ಕೆ ಬಿತ್ತು ಮತ್ತೊಂದು ಹೊಡೆತ: ತೈಲ, ನೈಸರ್ಗಿಕ ಅನಿಲ ಖರೀದಿಗೆ ನಿರ್ಬಂಧ ಹೇರಿದ ಶೆಲ್ ಕಂಪನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ 13 ದಿನಗಳಿಂದ ಉಕ್ರೇನ್‌ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ವಿರುದ್ಧ ಈಗಾಗಲೇ ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು, ಅಂತಾರಾಷ್ಟ್ರೀಯ ಕಂಪನಿಗಳು ವಿವಿಧ ವ್ಯಾಪಾರ ವಹಿವಾಟುಗಳಲ್ಲಿ ನಿರ್ಬಂಧ ಹೇರಿದ್ದು, ಇದೀಗ ಶೆಲ್ ಕಂಪನಿ ಕೂಡ ರಷ್ಯಾದಿಂದ ತೈಲ ಹಾಗೂ ನೈಸರ್ಗಿಕ ಅನಿಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ.
ಇಂಧನ ಪೂರೈಕೆಯ ಶೆಲ್ ಕಂಪನಿ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿದ್ದು, ತನ್ನ ಸಂಬಂಧಗಳನ್ನು ಕಡಿದುಕೊಳ್ಳಲ ನಿರ್ಧರಿಸಿದೆ.
ಹೀಗಾಗಿ ಶೆಲ್ ಕಂಪನಿ ರಷ್ಯಾದಲ್ಲಿನ ತನ್ನ ಸೇವಾ ಕೇಂದ್ರಗಳು, ವಿಮಾನ ಇಂಧನಗಳು ಹಾಗೂ ಇತರೆ ಕಾರ್ಯಾಚರಣೆಗಳನ್ನು ನಿಲ್ಲಿಸುವುದಾಗಿ ತಿಳಿಸಿದೆ.
ರಷ್ಯಾದಿಂದ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನೈಸರ್ಗಿಕ ಅನಿಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ ಸೇರಿದಂತೆ ಎಲ್ಲಾ ಹೈಡ್ರೋಕಾರ್ಬನ್‌ಗಳಿಂದ ಹಂತ ಹಂತವಾಗಿ ಹಿಂತೆಗೆದುಕೊಳ್ಳುವುದಾಗಿ ಕಂಪನಿ ವಿವರಿಸಿದೆ.
ಅಮೆರಿಕ, ಬ್ರಿಟನ್ ಮತ್ತು ಯುರೋಪಿಯನ್ ಯೂನಿಯನ್ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಆದರೆ ಜಾಗತಿಕ ಇಂಧನ ಸರಬರಾಜಿನ ಮೇಲೆ ಬೀರುವ ಪರಿಣಾಮದ ಕಾರಣದಿಂದ ರಷ್ಯಾದಿಂದ ತೈಲ ಹಾಗೂ ಅನಿಲ ಆಮದುಗಳಿಗೆ ನಿಷೇಧ ಹೇರಿರಲಿಲ್ಲ. ಆದರೆ ಈಗ ತೈಲ ಆಮದು ಮಾಡಿಕೊಳ್ಳುವುದಕ್ಕೆ ಬೈಡನ್‌ ಸರ್ಕಾರ ನಿರ್ಬಂಧ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!