ಬಂಟ್ವಾಳದ ಈ ಬಡ ಕುಟುಂಬಕ್ಕೆ ಮತ್ತೆ ಬದುಕು ಕಟ್ಟಲು ನೆರವಾಗುವಿರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮ, ಕಾಜಿಗುಳಿಯ ಬಡ ಕುಟುಂಬದ ಆಧಾರ ಸ್ಥಂಭವೇ ಅನಾರೋಗ್ಯಕ್ಕೆ ತುತ್ತಾದ ಪರಿಣಾಮ ದಿಕ್ಕು ತೋಚದೆ ಕಂಗಾಲಾಗಿದ್ದು, ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿದೆ.
ಮನೆಯ ಹಿರಿಯ ಬಾಬು ಪೂಜಾರಿ ಯವರಿಗೆ ಕಳೆದ ೧೦ ತಿಂಗಳ ಹಿಂದೆ ಗಂಟಲು ನೋವು ಕಾಣಿಸಿಕೊಂಡಿತ್ತು. ತಪಾಸಣೆ ನಡೆಸಿದಾಗ ಕ್ಯಾನ್ಸರ್ ಇರುವ ಬಗ್ಗೆ ತಿಳಿದು ಬಂದಿತ್ತು. ಅದಕ್ಕಾಗಿ ನಡೆಸಿದ ಆಪರೇಷನ್, ಕಿಮೊಥೆರಪಿಗೆ ಲಕ್ಷಾಂತರ ರೂಪಾಯಿ ಈಗಾಗಲೇ ವ್ಯಯವಾಗಿದೆ. ಇನ್ನೂ ಚಿಕಿತ್ಸೆಯ ಅಗತ್ಯವಿರುವ ಕಾರಣ ಬಡ ಕುಟುಂಬ ಈಗ ದಿಕ್ಕುತೋಚದಂತಾಗಿದೆ.
ತಂದೆಯ ಆರೈಕೆಯಲ್ಲಿ ಮಗ…
ದುಡಿಯುತ್ತಿದ್ದ ಮಗ ಈಗ ಕೆಲಸ ಬಿಟ್ಟು ತಂದೆಯ ಆರೈಕೆಗೆ ನಿಂತಿದ್ದಾರೆ. ಬಾಬು ಅವರ ಪತ್ನಿ ಮೋಹಿನಿ ಬೀಡಿ ಕಟ್ಟಿ ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಈ ನಡುವೆ ಇವರ ಆರೋಗ್ಯ ಕೂಡಾ ಆಗಾಗ ಕೈ ಕೊಡುತ್ತಿರುವುದು ಆತಂಕ ಹೆಚ್ಚಿಸಿದೆ.
ಆಸ್ಪತ್ರೆಗೆ ಅಲೆದಾಟ ಅನಿವಾರ್ಯ
ಬಾಬು ಅವರ ಚಿಕಿತ್ಸೆಗಾಗಿ ತಿಂಗಳಿಗೆ ಒಂದೆರಡು ಬಾರಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯ. ಈಗಾಗಲೇ ಇವರ ಚಿಕಿತ್ಸೆ ಗಾಗಿ ಲಕ್ಷಾಂತರ ರೂಪಾಯಿ ಹಣ ಆಸ್ಪತ್ರೆಯ ಪಾಲಗಿದೆ. ಇದ್ದ ಹಣವೆಲ್ಲವೂ ಖಾಲಿಯಾಗಿ ಈ ಕುಟುಂಬ ಮುಂದೇನು ಎಂದು ದಿಕ್ಕು ಕಾಣದೆ ಕಂಗಾಲಾಗಿದೆ.
ಟರ್ಪಾಲ್ ಹೊದೆಸಿದ ಪುಟ್ಟ ಮನೆ


ತಮ್ಮ ಸ್ವಂತ ಜಾಗದಲ್ಲಿ ಟರ್ಪಾಲ್ ಹೊದಿಸಿದ ಪುಟ್ಟ ಮನೆಯಲ್ಲಿ ವಾಸಿಸುತ್ತಿರುವ ಬಾಬು ಅವರ ಈ ಬಡ ಕುಟುಂಬ, ಜೀವನ ನಿರ್ವಹಣೆಗೆ ಪರದಾಡುತ್ತಿರುವುದರ ಜೊತೆಗೆ ಈಗ ಮನೆ ಯಜಮಾನ ಬಾಬು ಅವರ ಚಿಕಿತ್ಸೆಗೆ ದುಡ್ಡು ಹೊಂದಿಸಲು ಒದ್ದಾಡುತ್ತಿದೆ. ಹಾಸಿಗೆ ಹಿಡಿದಿರುವ ಮನೆ ಯಜಮಾನನ ಚಿಕಿತ್ಸೆಗಾಗಿ ಇದೀಗ ಈ ಕುಟುಂಬ ಸಹೃದಯಿ ದಾನಿಗಳ ನಿರೀಕ್ಷೆಯಲ್ಲಿದೆ. ಈ ಬಡ ಕುಟುಂಬಕ್ಕೆ ನೆರವಾಗುವಿರಾ?
ಹೀಗೆ ನೆರವಾಗಿ…
ಬ್ಯಾಂಕ್ ಖಾತೆ ವಿವರ: ಮೋಹಿನಿ. ಅಕೌಂಟ್ ನಂಬರ್ 71170100001315,, ಬ್ಯಾಂಕ್ ಆಫ್ ಬರೋಡ ಕುಪ್ಪೆಪದವು ಶಾಖೆ, IFSC code BRBOVJKUPP MICR: 575012045.. ಸಂಪರ್ಕ ಸಂಖ್ಯೆ: 953511 8084. (ಮಗ: ಚರಣ್)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!