Sunday, March 26, 2023

Latest Posts

ಭಾರತೀಯ ನೌಕಾಪಡೆಗೆ ಮತ್ತೊಂದು ಯಶಸ್ಸು: ಐಎನ್‌ಎಸ್ ವಿಶಾಖಪಟ್ಟಣಂನಿಂದ ನಡೆಸಿದ ವಾಯು ಕ್ಷಿಪಣಿ ಪರೀಕ್ಷೆ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ನೌಕಾಪಡೆ ಮತ್ತೊಂದು ಯಶಸ್ಸು ಸಾಧಿಸಿದ್ದು, ಐಎನ್‌ಎಸ್ ವಿಶಾಖಪಟ್ಟಣದಿಂದ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಎಮ್‌ಆರ್‌ಎಸ್‌ಎಎಂ ಅತ್ಯಂತ ನಿಖರತೆಯಿಂದ ಗುರಿಯನ್ನು ಮುಟ್ಟಿದೆ. ಇದು ಸಂಪೂರ್ಣವಾಗಿ ತಯಾರಾಗಿದ್ದು ಭಾರತದಲ್ಲಿ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಸ್ವಾವಲಂಬಿ ಭಾರತಕ್ಕೆ ದೊಡ್ಡ ಹೆಜ್ಜೆ ಇದಾಗಿದೆ. ಬಿಡಿಎಲ್ ಹೈದರಾಬಾದ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಸೆ.2021ರಲ್ಲಿ ಐಎಎಫ್ ಫ್ಲೀಟ್‌ಗೆ ಸೇರಿಸಲಾಯಿತು. ಈ ಕ್ಷಿಪಣಿಯ ವಿಶೇಷತೆ ಏನೆಂದರೆ, 360 ಡಿಗ್ರಿ ಸುತ್ತುವ ಮೂಲಕ ಗಾಳಿಯಲ್ಲಿ ಬರುವ ಬಹು ಗುರಿ ಅಥವಾ ಶತ್ರುಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಬಲ್ಲದು.
ಈ ಕ್ಷಿಪಣಿಯು 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷಿಪಣಿ, ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಕಣ್ಗಾವಲು ವಿಮಾನ ಮತ್ತು ವೈಮಾನಿಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!