ಇನ್ನೂ ಮೂರು ತಿಂಗಳೂ ರಣಬಿಸಿಲು, ಜೊತೆಗೆ ಬಿಸಿಗಾಳಿ ಸಾಧ್ಯತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ ಬಿಸಿಲಿಗೆ ಹೈರಾಣಾಗಿರುವ ಜನ ಇನ್ನೇನು ಶಿವರಾತ್ರಿ ಮುಗಿದ ನಂತರ ಬಿಸಿಲು ಕಡಿಮೆಯಾಗಬಹುದು ಎಂದು ಭಾವಿಸಿದ್ದರು. ಆದರೆ ಇನ್ನೂ ಮೂರು ತಿಂಗಳು ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಿಸಿಲು ಹೆಚ್ಚಾಗಬಹುದು, ಜೊತೆಗೆ ಬಿಸಿಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಕಡಿಮೆ ಮಳೆಯಿಂದಾಗಿ ಜನರ ಈಗ ನೀರಿಗೆ ಪರದಾಡುತ್ತಿದ್ದಾರೆ. ಫೆಬ್ರವರಿಯಲ್ಲೇ ದಾಖಲೆಯ ಉಷ್ಟಾಂಶ ಜನರನ್ನು ಕಾಡುತ್ತಿದೆ. ಮಾರ್ಚ್‌ನಿಂದ ಬಿಸಿಲು ಇನ್ನಷ್ಟು ಹೆಚ್ಚಾಗಿ, ಮೇ ಅಂತ್ಯದವರೆಗೂ ಕಾಡಲಿದೆ.

ಇದೀಗ ಜನರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ದಿನಕ್ಕೆ ಮೂರು-ನಾಲ್ಕು ಲೀಟರ್ ನೀರು, ಹಣ್ಣು, ಉತ್ತಮ ಆಹಾರ. ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಆದಷ್ಟು ಮನೆಯಲ್ಲೇ ಇರುವುದು ಉತ್ತಮ. ಇನ್ನು ಬಿಸಿಲಿನಲ್ಲಿ ಓಡಾಡುವ ಪರಿಸ್ಥಿತಿ ಇದ್ದರೆ ಛತ್ರಿ ಜೊತೆಗೆ ಸನ್‌ಸ್ಕ್ರೀನ್ ಬಳಕೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!