ಬೆಂಗಳೂರು ಸೇರಿ 7 ರಾಜ್ಯಗಳಲ್ಲಿ 17 ಕಡೆ NIA ದಾಳಿ: ಪರಪ್ಪನ ಅಗ್ರಹಾರ ಜೈಲಿನಲ್ಲೂ NIA ಶೋಧ‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮೇಶ್ವರಂ ಕೆಫೆ ಸ್ಫೋಟದ ನಂತರ ಎನ್‌ಐಎ ತಂಡ ಕಾರ್ಯಾಚರಣೆಗೆ ಇಳಿದಿದ್ದು, ಸಂಚುಕೋರರನ್ನು ಪತ್ತೆ ಹಚ್ಚಲು ತೀವ್ರ ತನಿಖೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎನ್ ಐಎ 7 ರಾಜ್ಯಗಳ 17 ಸ್ಥಳಗಳಲ್ಲಿ ಶೋಧ ನಡೆಸಿದೆ.

ಬೆಂಗಳೂರಿನಲ್ಲೂ ಸಕ್ರಿಯವಾಗಿರುವ ಎನ್‌ಐಎ ತಂಡ ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಿದೆ. ಒಟ್ಟು 17 ಸ್ಥಳಗಳನ್ನು ಉಗ್ರಗಾಮಿ ಪ್ರಚೋದನೆ ತಾಣಗಳೆಂದು ಗುರುತಿಸಲಾಗಿದ್ದು, ಆರ್‌ಟಿ ನಗರ ಸೇರಿದಂತೆ ಬೆಂಗಳೂರಿನ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಸಜೀವ ಗ್ರೆನೇಡ್‌ಗಳು ಮತ್ತು ಜೀವಂತ ಗುಂಡುಗಳು ಪತ್ತೆಯಾದ ಪ್ರಕರಣದ ಶೋಧ ಮತ್ತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರ್‌ಟಿ ನಗರದ ಟಿ ನಝೀರ್ ಪ್ರಕರಣವನ್ನು ಶೋಧಿಸಿ ತನಿಖೆ ನಡೆಸಿದ್ದಾರೆ. ಜತೆಗೆ ಸುಲ್ತಾನ್ ಪಾಳ್ಯದಲ್ಲೂ ಎನ್‌ಐಎ ಪರಿಶೀಲಿಸಿದೆ.

ಟಿ. ನಝೀರ್ ಜೊತೆಗಿನ ಒಡನಾಟ ಮತ್ತು ಐಸಿಸ್ ಜೊತೆಗಿನ ಸಂಪರ್ಕದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಚೆನ್ಬೈನ ರಾಮನಾಥಪುರಂ ಜಿಲ್ಲೆಯ ಕೀಲಕಾರೈ ಪ್ರದೇಶದ ಬಳಿ ಶಂಶುದ್ದಿನ್ ಎಂಬುವರ ಮನೆಯ ಮೇಲೆ ದಾಳಿ ನಡೆದಿದೆ. ಹಲವು ಯುವಕರನ್ನು ಉಗ್ರವಾದಕ್ಕೆ ಪ್ರಚೋದನೆ ನೀಡಿದ ಆರೋಪ ಇವರ ಮೇಲಿದ್ದು, ಎನ್‌ಐಎ ಅಧಿಕಾರಿಗಳು ಆತನ ಮನೆಯನ್ನು ಶೋಧಿಸಿದ್ದು, ರಾಮೇಶ್ವರಂನಲ್ಲಿನ ಕೆಫೆ ದಾಳಿಯಲ್ಲಿ ಈತ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!