ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ H3N2 ವೈರಸ್’ ಗೆ ಮತ್ತೊಂದು ಬಲಿಯಾಗಿದ್ದು,ಗುಜರಾತ್’ನ ವಡೋದರಾದಲ್ಲಿ ವೈರಸ್’ನಿಂದ ಮಂಗಳವಾರ ಮೊದಲ ಸಾವು ಸಂಭವಿಸಿದೆ.
ಆರೋಗ್ಯ ಅಧಿಕಾರಿಗಳ ಮಾಹಿತಿಯ ಪ್ರಕಾರ, ಗುಜರಾತ್ನಲ್ಲಿ 58 ವರ್ಷದ ಮಹಿಳೆ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ.
ವಡೋದರಾದ ಎಸ್‌ಎಸ್ಜಿ ಆಸ್ಪತ್ರೆಯಲ್ಲಿ ರೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದರೊಂದಿಗೆ, ಎಚ್ 3 ಎನ್ 2 ವೈರಸ್’ನಿಂದ ಭಾರತದ ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿದೆ, ಕರ್ನಾಟಕದ ಹಾಸನ ಜಿಲ್ಲೆಯ 82 ವರ್ಷದ ವ್ಯಕ್ತಿ ಮೊದಲ ಸಾವು ವರದಿಯಾಗಿತ್ತು.