ಸತ್ಯೇಂದರ್‌ ಜೈನ್‌ ಮತ್ತೊಂದು ವಿಡಿಯೋ ವೈರಲ್: ಇದು ಜೈಲಲ್ಲ…ರೆಸಾರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊದು ವಿಡಿಯೋ ಬಹಿರಂಗವಾಗಿದೆ. ಜೈನ್‌ ಜೈಲು ಪಾಲಾದ ಬಳಿಕ 28ಕೆಜಿ ಸಣ್ಣ ಆಗಿದ್ದಾರೆ ಎಂಬ ಮಾಹಿತಿ ನೀಡಿದದ್ರ ಬೆನ್ನಲ್ಲೇ ಭಕ್ಷ್ಯಭೋಜನ ಸೇವಿಸುತ್ತಿರುವ ವಿಡಿಯೋ ಹೊರಬಿದ್ದಿದೆ. ಈ ಮೊದಲೇ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಸತ್ಯೇಂದರ್ ಜೈನ್ ಸ್ಪೆಷಲ್‌ ಊಟ ನೋಡಿ ಇದೇನ್‌ ಜೈಲಾ ಅಥವಾ ರೆಸಾರ್ಟಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹಲವರು ಟೀಕಿಸಿದ್ದಾರೆ.

ವೈರಲ್‌ ಆಗಿರುವ ವೀಡಿಯೋದಲ್ಲಿ ಸತ್ಯೇಂದರ್ ಜೈನ್ ಅವರ ಬೆಡ್ ಮೇಲೆ ಮೂರು ವಿಭಿನ್ನ ಬಾಕ್ಸ್ ಗಳು ಕಾಣಿಸುತ್ತಿವೆ. ಇದರಲ್ಲಿ ವಿವಿಧ ರೀತಿಯ ಖಾದ್ಯಗಳ ಜೊತೆಗೆ ಸತ್ಯೇಂದ್ರ ಜೈನ್ ಹಣ್ಣು ತಿನ್ನುತ್ತಿರುವುದು ಕಂಡುಬಂದಿದೆ. ಜೈಲು ಸೇರಿರುವ ಸಚಿವರು 8 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನುತ್ತಿವೆ ಜೈಲು ಮೂಲಗಳು. ಆದರೆ, ಸತ್ಯೇಂದ್ರ ವಕೀಲರು ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದು, ಸತ್ಯೇಂದ್ರನ ವಕೀಲರು ಜೈಲು ಪಾಲಾದ ನಂತರ 28 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಗಮನಾರ್ಹ. ಈ ಹೇಳಿಕೆ ನೀಡಿದ ಬಳಿಕ ಸಚಿವರ ಆಹಾರ ಸೇವನೆಯ ವಿಡಿಯೋ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ಮಸಾಜ್‌ ವಿಡಿಯೋ ವೈರಲ್‌ ಆಗಿದ್ದು, ಮಸಾಜ್ ಮಾಡುತ್ತಿದ್ದ ವ್ಯಕ್ತಿ ಫಿಸಿಯೋಥೆರಪಿಸ್ಟ್ ಅಲ್ಲ ರೇಪಿಸ್ಟ್‌ ಎಂದು ತಿಳಿದುಬಂದಿದೆ. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಹಿನ್ನೆಲೆಯಲ್ಲಿ ಈ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!