ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಸಮರಾಂಗಣದಿಂದ ಇನ್ನೊಂದು ಹೇಯ ವಿಡಿಯೋ ಬಿಡುಗಡೆಯಾಗಿದೆ.
ದಕ್ಷಿಣ ಇಸ್ರೇಲ್‌ನ ಮೇಲೆ ನಡೆಸಿದ ಕ್ರೂರ ದಾಳಿಯ ಸಂದರ್ಭ ಒತ್ತೆಯಾಳಾಗಿ ಇಟ್ಟುಕೊಂಡ ಇಸ್ರೇಲಿ ಮಕ್ಕಳ ವಿಡಿಯೋವನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.
ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಬಂಡುಕೋರರು ಈ ವೀಡಿಯೊ ಹಂಚಿಕೊಂಡಿದ್ದಾರೆ. ಜೊತೆಗೆ ಇದರಲ್ಲಿ ಕಿಬ್ಬತ್ಜ್ ಹೋಲಿಟ್ ಕದನದ ಮಧ್ಯೆ ಹಮಾಸ್ ಹೋರಾಟಗಾರರು ಮಕ್ಕಳ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ ಎಂಬ ಅಡಿಬರಹವನ್ನೂ ನೀಡಲಾಗಿದೆ.
ಈ ಬಗ್ಗೆ ವರದಿ ಮಾಡಿರುವ ದಿ ಜೆರುಸಲೆಮ್ ಪೋಸ್ಟ್, ಈ ವೀಡಿಯೋದಲ್ಲಿ ಕಾಣುವ ಮಕ್ಕಳನ್ನು ಇನ್ನೂ ಗುರುತಿಸಲಾಗಿಲ್ಲ. ಮಕ್ಕಳನ್ನು ಒತ್ತೆಯಾಳಾಗಿಸುವ ವೇಳೆ ಅವರ ಹೆತ್ತವರನ್ನು ಕೊಂದಿದ್ದಾರೆಯೇ ಎಂಬುದು ಕೂಡಾ ಸ್ಪಷ್ಟವಾಗಿಲ್ಲ ಎಂದು ಹೇಳಿದೆ.
ದಕ್ಷಿಣ ಇಸ್ರೇಲ್‌ನಲ್ಲಿರುವ ಕಿಬ್ಬುಟ್ಜ್ ಹೋಲಿಟ್, ಗಾಜಾ ಗಡಿಗೆ ಬಹಳ ಹತ್ತಿರದಲ್ಲಿದೆ. ಇಲ್ಲಿನ ದಾಳಿ ವೇಳೆ 13 ಇಸ್ರೇಲಿಗಳನ್ನು ಹತ್ಯೆಗೈಯಲಾಗಿತ್ತು.
https://x.com/Jerusalem_Post/status/1712883595189104822?s=20