ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ಷುರಿ ಹೊಟೇಲ್ ರೂಮ್‌ಗಳಿಗೆ ತೆರಳೋದು, ಅಷ್ಟು ದುಡ್ಡು ಕೊಟ್ಟು ರೂಮ್ ಬುಕ್ ಮಾಡಿ ತಿಗಣೆ ಕೈಲಿ ಕಚ್ಚಿಸಿಕೊಳ್ಳೋದು..
ಈ ಘಟನೆ ನಡೆದಿದ್ದು ಯುನೈಟೆಡ್ ಕಿಂಗ್‌ಡಮ್‌ನ ಬ್ಲ್ಯಾಕ್‌ಪೂಲ್‌ನಲ್ಲಿರೋ ಕ್ಯಾಲಿಪ್ಸೋ ಅನ್ನೋ ಹೊಟೇಲ್‌ನಲ್ಲಿ. ಶರೋನ್ ಎಂಬ ಮಹಿಳೆ ತನ್ನ ಬೆಸ್ಟ್ ಫ್ರೆಂಡ್ ಬರ್ಥ್‌ಡೇಗಾಗಿ ೧೭ ಸಾವಿರ ರೂಪಾಯಿ ಕೊಟ್ಟು ರೂಮ್ ಬುಕ್ ಮಾಡಿದ್ದಳು.
ನೋಡೋಕೆ ಅತಿ ಸುಂದರವಾಗಿದ್ದ ರೂಮ್ ಬಂಡವಾಳ ಹೊರಬಂದಿದ್ದು ರಾತ್ರಿಯೇ! ಶರೋನ್‌ಗೆ ೨೦೦ಕ್ಕೂ ಹೆಚ್ಚು ಕಡೆ ತಿಗಣೆಗಳು ಅಟ್ಯಾಕ್ ಮಾಡಿವೆ. ರಾತ್ರಿ ಸಿಕ್ಕಾಪಟ್ಟೆ ಸುಸ್ತಾಗಿ ಮಲಗಿದ್ದ ಶರೋನ್‌ಗೆ ತಿಗಣೆ ಅಟ್ಯಾಕ್ ಗಮನಕ್ಕೇ ಬಂದಿಲ್ಲ. ಬೆಳಗ್ಗೆ ಹಾಸಿಗೆ ಮೇಲೆ ರಕ್ತದ ಕಲೆ ನೋಡಿ ಗಾಬರಿಯಾಗಿದ್ದಾರೆ. ಹಾಸಿಗೆ ತುಂಬಾ ತಿಗಣೆಗಳು ಕಾಣಿಸಿವೆ. ತಕ್ಷಣವೇ ಹೊಟೇಲ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಸಂಪೂರ್ಣ ರೀಫಂಡ್ ಜೊತೆಗೆ ಮೆಡಿಕಲ್ ಚಿಕಿತ್ಸೆಗಾಗು ಒಂಬತ್ತು ಸಾವಿರ ರೂಪಾಯಿಯನ್ನು ಹೊಟೇಲ್ ನೀಡಿದೆ.