Monday, October 2, 2023

Latest Posts

ಗ್ಯಾರಂಟಿ ಜಾರಿಗೊಳಿಸಿದ ಮೇಲೆ ಉತ್ತರಿಸುವೆ: ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ:

ಕಾಂಗ್ರೆಸ್ ಭರವಸೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಗೊಳಿಸಿದ ಮೇಲೆನೇ ಅದಕ್ಕೆ ಪ್ರತಿಕ್ರೀಯಿಸುವುದು ಸೂಕ್ತ. ಯಾವ ಯೋಜನೆಗಳನ್ನು ನೀಡುತ್ತಾರೆ. ಆ ನಂತರದಲ್ಲಿ ಪಕ್ಷ ಯಾವ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ನಿರ್ಧರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗುವುದಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಚುನಾವಣೆಯ ಪೂರ್ವದಲ್ಲಿ ನೀಡಿದ ಐದು ಭರವಸೆಗಳನ್ನು ಜೂನ್ ಒಂದರಿಂದ ಜಾರಿಗೆ ತರಲಾಗವುದು ಎಂದು ಹೇಳಿದ್ದರು ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅವು ಜಾರಿಗೆ ಆಗುತ್ತವೆ ಎಂಬ ಭರವಸೆ ಕಾಂಗ್ರೆಸ್ಸಿಗರಲ್ಲೇ ಇಲ್ಲ ಒಂದು ವೇಳೆ ಈಡೇರದಿದ್ದರೆ ಈ ಕುರಿತು ನಿಮ್ಮ ನಿಲುವು ಏನು ಎಂಬುದಕ್ಕೆ ಇನ್ನು ಸಮಯವಿದೆ ಆ ನಂತರ ನಿರ್ಧರಿಸಲಾಗುವುದು ಎಂದಷ್ಟೇ ಪ್ರತಿಕ್ರೀಯಿಸಿದರು.

ಪಠ್ಯ ಕ್ರಮ ಬದಲಾವಣೆಗೆ ಸಮೀತಿಯನ್ನು ರಚಿಸುವ ಕುರಿತು ಹೇಳಿದ್ದಾರೆ. ಅವರು ಪಠ್ಯ ಕ್ರಮದಲ್ಲಿ ಯಾವ ರೀತಿ ಬದಲಾಯಿಸಲಾಗುವುದು ಎನ್ನುವುದನ್ನು ಗಮನಿಸೋಣ ಆ ನಂತರದಲ್ಲಿ ಪ್ರತಿಕ್ರೀಯೆ ನೀಡುವುದು ಸೂಕ್ತವಾದುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!