ಲೋಕಾಯುಕ್ತ ದಾಳಿ: ಹಾವೇರಿ ನಿರ್ಮಿತಿ ಕೇಂದ್ರ ಇಂಜಿನಿಯರ್ ಮನೆಯಲ್ಲಿ ಸಿಕ್ಕಿತು ಕೋಟಿ ಕೋಟಿ ರೂಪಾಯಿ ಮೌಲ್ಯದ ಆಸ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಾವೇರಿ ನಿರ್ಮಿತಿ ಕೇಂದ್ರ ಇಂಜಿನಿಯರ್ ವಾಗೀಶ್ ಶೆಟ್ಟರ ಅವರ ರಾಣೇಬೆನ್ನೂರ ನಗರದಲ್ಲಿನ ಮನೆ ಹಾಗೂ ಕಚೇರಿ ಮೇಲೆ ದಾಳಿ ವೇಳೆ ಲಕ್ಷ ಲಕ್ಷ ನಗದು. ಕೋಟಿ ಕೋಟಿ ರೂಗಳ ಆಸ್ತಿ ದಾಖಲಾತಿಗಳು ಪತ್ತೆಯಾಗಿದೆ.

ಬುಧವಾರ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಕೊಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯ ದಾಖಲಾತಿಗಲು ಪತ್ತೆಯಾಗಿವೆ. ಅರ್ಧ ಕೆ.ಜಿ ಬಂಗಾರ, ೨ ಕೆ.ಜಿ ಬೆಳ್ಳಿ. ೧೮.೩೦ ಲಕ್ಷ ರೂಪಾಯಿ ನಗದು, ಹಣ ಏಣಿಕೆ ಮಾಡುವ ಮಶೀನ್. ೩ ಕಾರು, ೨ ಟ್ರ್ಯಾಕ್ಟರ್, ೨ ಬೈಕ್. ೮ ಮನೆ, ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು ೧೬ ಸೈಟ್, ೬೫ ಎಕರೆ ಭೂಮಿ ಹೊಂದಿರುವ ದಾಖಲೆ ಪತ್ತೆ ಯಾಗಿವೆ. ಇವೆಲ್ಲ ಸೇರಿ ಒಟ್ಟು ೪.೭೫ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದಲ್ಲದೆ ೧೦ ಇಂಚಿನ ಜಿಂಕೆ ಕೊಂಬು ಸಹ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!