ಲಂಚಕೋರರ ಬಗ್ಗೆ ವಾಟ್ಸಾಪ್‌ನಲ್ಲಿ ದೂರು ಕೊಡಿ; ನಂಬರ್ ಶೇರ್‌ ಮಾಡಿದ ಪಂಜಾಬ್‌ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂಜಾಬ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಭಗತ್‌ ಸಿಂಗ್‌ ಮಾನ್‌ ಮಹತ್ವದ ಘೋಷಣೆ ಮಾಡಿದ್ದಾರೆ. ಕಾಂತ್ರಿಕಾರಿ ಭಗತ್ ಸಿಂಗ್ ಹುತಾತ್ಮ ದಿನವಾದ ಮಾರ್ಚ್ 23 ರಂದು ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ಭಗವಂತ್ ಮಾನ್ ಘೋಷಿಸಿದ್ದಾರೆ.
ಜನಸಾಮಾನ್ಯರ ಬಳಿ ಯಾರಾದರು ಲಂಚ ಕೇಳಿದರೆ ಅದರ ಆಡಿಯೋ ಅಥವಾ ವೀಡಿಯೋ ರೆಕಾರ್ಡ್‌ ಮಾಡಿ ನನ್ನ ವಾಟ್ಸಾಪ್‌ ನಂಬರ್‌ ಗೆ ಕಳುಹಿಸಿಕೊಡಿ. ಅದು ನನ್ನ ವೈಯಕ್ತಿಕ ವಾಟ್ಸಾಪ್ ನಂಬರ್ ಆಗಿರುತ್ತದೆ. ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಮಾನ್‌ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಇನ್ನು ಮುಂದೆ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಶೇಖಡಾ ತೊಂಬತ್ತೊಂಬತ್ತ ರಷ್ಟು ಅಧಿಕಾರಿಗಳು ಪ್ರಾಮಾಣಿಕರಾಗಿದ್ದಾರೆ. ಆದರೆ 1 ಪ್ರತಿಶತದಷ್ಟು ಭ್ರಷ್ಟರಿಂದ ಸಮಾಜದ ಜನರು ಪರಿತಪಿಸುತ್ತಿದ್ದಾರೆ. ಆಮ್‌ ಆದ್ಮಿ ಈ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆಯಲಿದೆ ಎಂದಿದ್ದಾರೆ. ಭ್ರಷ್ಟಾಚಾರ ನಿಗ್ರಹ ಸಂಖ್ಯೆ ನನ್ನದೇ ಸ್ವಂತ ನಂಬರ್‌ ಆಗಿದ್ದು, ಭ್ರಷ್ಟಾಚಾರಿಗಳ ವಿರುದ್ಧ ಗಮನಹರಿಸಿ ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!