ಇಮ್ರಾನ್ ಖಾನ್ ಭಾರತ ಇಷ್ಟ ಪಡುವುದಾದರೆ ಪಾಕ್ ಬಿಟ್ಟು ಹೋಗಲಿ: ಮರ್ಯಮ್ ನವಾಜ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಅವಿಶ್ವಾಸ ನಿರ್ಣಯದ ಮತದಾನದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದು, ಇದರ ಬೆನ್ನಲೇ ಪಾಕ್​ನ ಪ್ರತಿ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರ್ಯಮ್ ಇಮ್ರಾನ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿರುವ ಮರ್ಯಮ್ ನವಾಜ್ , ಇಮ್ರಾನ್ ಖಾನ್ ಪಕ್ಷವೇ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದೆ. ಅವರನ್ನು ಬೇರೆಯವರು ಯಾರೂ ಅಧಿಕಾರದಿಂದ ಕೆಳಗಿಳಿಸಿಲ್ಲ ಎಂಬುದನ್ನು ಯಾರಾದರೂ ಅವರಿಗೆ ತಿಳಿಸಬೇಕು. ಅವರು ಭಾರತವನ್ನು ಇಷ್ಟ ಪಡುವುದಾದರೆ ಪಾಕಿಸ್ತಾನವನ್ನು ಬಿಟ್ಟು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈವರೆಗೆ ಹಲವಾರು ಪ್ರಧಾನಿಗಳ ವಿರುದ್ಧ 27 ಬಾರಿ ಅವಿಶ್ವಾಸ ನಿರ್ಣಯಗಳು ಬಂದಿವೆ. ಆದರೆ ಯಾರೂ ಸಂವಿಧಾನ, ಪ್ರಜಾಪ್ರಭುತ್ವದ ಜೊತೆಗೆ ಆಟವಾಡಿಲ್ಲ. ವಾಜಪೇಯಿ ಒಂದು ಮತದಿಂದ ಸೋತು ಮನೆಗೆ ಹೋದರು. ನಿಮ್ಮಂತೆ ದೇಶ, ಸಂವಿಧಾನ ಮತ್ತು ರಾಷ್ಟ್ರವನ್ನು ಒತ್ತೆಯಾಳಾಗಿ ತೆಗೆದುಕೊಂಡಿಲ್ಲ ಎಂದಿರುವ ಮರ್ಯಮ್ ನವಾಜ್ ಅಧಿಕಾರಕ್ಕಾಗಿ ಈ ರೀತಿ ಅಳುತ್ತಿರುವವರನ್ನು ನಾನು ನೋಡಿದ್ದು ಇದೇ ಮೊದಲು ಎಂದು ಇಮ್ರಾನ್​ಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರದಂದು ರಾಷ್ಟ್ರವನ್ನುದ್ದೇಶಿಸಿ ಇಮ್ರಾನ್ ಖಾನ್ ಭಾಷಣ ಮಾಡಿದ್ದು, ಭಾರತವನ್ನು ಹೊಗಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!