ಪಿಒಕೆಯಲ್ಲಿ ಭಾರತದ ಜಪ: ಭಾರತಕ್ಕೆ ಹೋಗುತ್ತೇವೆ, ಕಾರ್ಗಿಲ್ ರಸ್ತೆಯನ್ನು ತೆರೆಯಿರಿ ಅಂತಿದಾರೆ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಲ್ಲಿ ಆರ್ಥಿಕ ಮತ್ತು ಆಹಾರ ಬಿಕ್ಕಟ್ಟು ಜನರನ್ನು ಹೈರಾಣಾಗಸಿದ್ದು, ಪಾಕ್‌ ಜನರ ಕಣ್ಣು ಇದೀಗ ಭಾರತದ ಮೇಲೆ ಬಿದ್ದಿದೆ. ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿಬಿದ್ದ ಜನರೀಗ ಭಾರತದ ಜಪ ಮಾಡುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನದ ಜನರು ಸಾಮೂಹಿಕ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ತಮ್ಮ ಪ್ರದೇಶವನ್ನು ಭಾರತದಲ್ಲಿ ಲಡಾಖ್‌ನಲ್ಲಿ ವಿಲೀನಗೊಳಿಸಿ ಎಂದು ಒತ್ತಾಯಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು ಪಾಕಿಸ್ತಾನದ ವರ್ತನೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ.

ಗಿಲ್ಗಿಟ್ ಬಾಲ್ಟಿಸ್ತಾನ್ ನಲ್ಲಿ ಬೃಹತ್ ರ್ಯಾಲಿ ಬಂದ ಪ್ರತಿಭಟನಾಕಾರರು ಕಾರ್ಗಿಲ್ ರಸ್ತೆಯನ್ನು ಪುನಃ ತೆರೆಯಲು ಮತ್ತು ತಮ್ಮ ಪ್ರದೇಶವನ್ನು ಕಾರ್ಗಿಲ್ ಜಿಲ್ಲೆಗೆ ವಿಲೀನಗೊಳಿಸುವಂತೆ ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಪ್ರದರ್ಶಿಸಿದರು. ಕಳೆದ 12 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಪಾಕಿಸ್ತಾನ ಸರ್ಕಾರವು ತಮ್ಮ ವಿರುದ್ಧ ತಾರತಮ್ಯ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ.

ಗೋಧಿ ಮತ್ತು ಇತರ ಆಹಾರ ಪದಾರ್ಥಗಳ ಮೇಲಿನ ಸಬ್ಸಿಡಿ ಕೊರತೆ, ಅಕ್ರಮ ಭೂಮಿ ಒತ್ತುವರಿ ಮುಂತಾದ ಸಮಸ್ಯೆಗಳನ್ನು ಪ್ರತಿಭಟನಾಕಾರರು ಮುನ್ನಲೆಗೆ ತರುತ್ತಿದ್ದಾರೆ. ಸದ್ಯ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರದೇಶಗಳಲ್ಲಿ, ಒಂದು ಕಿಲೋ ಗೋಧಿ ಹಿಟ್ಟಿನ ಬೆಲೆ ರೂ. 150 ಮತ್ತು ಅದೇ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ರೂ. 200 ವರೆಗೆ ಇದೆ. ಇದರೊಂದಿಗೆ ಪಾಕ್ ಸರ್ಕಾರ ನಮ್ಮ ಮೇಲೆ ಮಲತಾಯಿ ಪ್ರೀತಿ ತೋರಿಸುತ್ತಿದೆ ಎಂದು ಪಿಒಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಪರಿಸ್ಥಿತಿಗಳು ಎಷ್ಟು ಕೆಟ್ಟದಾಗಿವೆ ಎಂಬುದನ್ನು ಈ ವೀಡಿಯೊಗಳು ತೋರಿಸುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಹಲವು ದೇಶಗಳು ಪಾಕಿಸ್ತಾನಕ್ಕೆ ಸಾಲ ನೀಡಲು ಆಸಕ್ತಿ ತೋರುತ್ತಿಲ್ಲ. ಮತ್ತೊಂದೆಡೆ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ದಿನನಿತ್ಯ ಸರಕುಗಳನ್ನು ಕೊಳ್ಳಲಾಗದೆ ಜನ ತತ್ತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!