Thursday, December 1, 2022

Latest Posts

ಪಕ್ಷ ವಿರೋಧಿ ಚಟುವಟಿಕೆ: ಏಳು ಮಂದಿ ಬಿಜೆಪಿ ಶಾಸಕರ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಚುನಾವಣೆ ದಿನೇ ದಿನೇ ವಿವಿಧ ರೀತಿಯಲ್ಲಿ ರೋಚಕವಾಗಿದ್ದು, ಇದೀಗ ಬಿಜೆಪಿ ಟಿಕೆಟ್​ ವಂಚಿತರಾದ ಬಳಿಕ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಏಳು ಮುಖಂಡರ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಂಡಿದ್ದು, ಪಕ್ಷದಿಂದ ಅಮಾನತುಗೊಳಿಸಿದೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಆರ್. ಪಟೇಲ್ ಅವರನ್ನು ಉಲ್ಲೇಖಿಸಿ ಬಿಜೆಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ನರ್ಮದಾ ಜಿಲ್ಲೆಯ ನಂದೋಡ್‌ನ ಹರ್ಷದ್ ವಾಸವ ಸೇರಿದಂತೆ ಏಳು ಬಿಜೆಪಿ ನಾಯಕರನ್ನು ಅಮಾನತುಗೊಳಿಸಲಾಗಿದೆ. ಜುನಾಗಢದ ಅರವಿಂದ್ ಲಡಾನಿ, ಸುರೇಂದ್ರನಗರದ ಧಂಗದ್ರಾದಿಂದ ಛತ್ರಸಿಂಗ್ ಗುಂಜಾರಿಯಾ, ವಲ್ಸಾದ್‌ನ ಪರಡಿಯಿಂದ ಕೇತನ್ ಭಾಯ್ ಪಟೇಲ್, ರಾಜ್‌ಕೋಟ್ ಗ್ರಾಮಾಂತರದಿಂದ ಭರತ್ ಭಾಯಿ ಚಾವ್ಡಾ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್‌ನಿಂದ ಉದಯ್ ಭಾಯಿ ಶಾ ಮತ್ತು ಅಮ್ರೇಲಿಯ ರಾಜುಲಾದಿಂದ ಟಿಕೆಟ್ ಬಯಸಿದ್ದ ಕರಣ್ ಭಾಯಿ ಅವರು ಅಮಾನತುಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!