ಸೈನ್ಯ ಸಜ್ಜುಗೊಳಿಸುವಿಕೆ ಘೋಷಣೆ ಬೆನ್ನಲ್ಲೇ ರಷ್ಯಾದಲ್ಲಿ ಭುಗಿಲೆದ್ದ ಯುದ್ಧ ವಿರೋಧಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ಉಕ್ರೇನ್‌ ವಿರುದ್ಧದ ಯುದ್ಧವನ್ನು ಮತ್ತಷ್ಟು ಚುರುಕುಗೊಳಿಸಲು ಭಾಗಶಃ ಸೈನ್ಯವನ್ನು ಸಜ್ಜುಗೊಳಿಸುತ್ತಿರುವ ಘೋಷಣೆ ಮಾಡಿದ ಬೆನ್ನಲ್ಲೇ ರಷ್ಯಾ ದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ ಎಂದು ಸ್ವತಂತ್ರ ಮೇಲ್ವಿಚಾರಣಾ ಗುಂಪು OVD-ಇನ್ಫೋ ವರದಿ ಮಾಡಿವೆ.

ಪ್ರತಿಭಟನೆಗಳನ್ನು ರಷ್ಯಾ ಸರ್ಕಾರವು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಆಂದೋಲನದ ಸಮಯದಲ್ಲಿ ಸುಮಾರು 100 ಜನರನ್ನು ಬಂಧಿಸಲಾಗಿದೆ.

ಜಾಲತಾಣಗಳಲ್ಲಿ ಪ್ರತಿಭಟನೆಯ ಚಿತ್ರಗಳು ಸೋರಿಕೆಯಾಗಿದ್ದು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಲಾಠಿಯಿಂದ ಥಳಿಸುತ್ತಿರುವುದನ್ನು ತೋರಿಸಿದೆ. ಪ್ರತಿಭಟನಾ ಪ್ರದೇಶಗಳ ವೀಡಿಯೊಗಳು ಪೊಲೀಸರು ಇಸಾಕಿವ್ಸ್ಕಿ ಕ್ಯಾಥೆಡ್ರಲ್‌ನಲ್ಲಿ ಜನಸಮೂಹವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸಿದೆ. ಹಲವು ನಗರಗಳಲ್ಲಿ ಯುದ್ಧ ವಿರೋಧಿ ಘೋಷಣೆಗಳನ್ನು ಕೂಗುತ್ತ ಜನರು ಪ್ರತಿಭಟಿಸುತ್ತಿರುವ ಅನೇಕ ವೀಡಿಯೋಗಳು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಮಾಸ್ಕೋದ ವೀಡಿಯೊಗಳಲ್ಲಿ, ಪ್ರತಿಭಟನಾಕಾರರನ್ನು ನಗರದ ಮಧ್ಯಭಾಗದಲ್ಲಿ ಪೊಲೀಸರು ಕೊಂಡೊಯ್ಯುತ್ತಿರುವುದು ಕಂಡುಬಂದಿದೆ.

OVD-ಮಾಹಿತಿ ಪ್ರಕಾರ, ಮಾಸ್ಕೋ ಸಮಯ ರಾತ್ರಿ 8 ಗಂಟೆಯ ಹೊತ್ತಿಗೆ, ರಷ್ಯಾದಾದ್ಯಂತ 30 ನಗರಗಳಲ್ಲಿ 535 ಜನರನ್ನು ಬಂಧಿಸಲಾಗಿದೆ.

OVD-ಮಾಹಿತಿ ಪ್ರಕಾರ ಇರ್ಕುಟ್ಸ್ಕ್ ಮತ್ತು ಕ್ರಾಸ್ನೊಯಾರ್ಸ್ಕ್, ಯೆಕಟೆರಿನ್ಬರ್ಗ್, ಚೆಲ್ಯಾಬಿನ್ಸ್ಕ್, ನೊವೊಸಿಬಿರ್ಸ್ಕ್, ಉಲಾನ್-ಉಡೆ, ಟಾಮ್ಸ್ಕ್, ಉಫಾ, ಪೆರ್ಮ್, ಬೆಲ್ಗೊರೊಡ್ ಮತ್ತು ಮಾಸ್ಕೋದಲ್ಲಿ ಬಂಧನಗಳನ್ನು ಮಾಡಲಾಗಿದೆ. ಮಾಸ್ಕೋ ಪ್ರಾಸಿಕ್ಯೂಟರ್ ಕಚೇರಿಯು ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿ, 15 ವರ್ಷಗಳವರೆಗೆ ಜೈಲಿನಲ್ಲಿ ಇರಿಸುವುದಾಗಿ ಬೆದರಿಕೆ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!