ಕಾಂತಾರಾ ಸಿನಿಮಾ ಮೇಲೆ ಹೆಚ್ಚಾಯ್ತು ನಿರೀಕ್ಷೆ, ಪ್ರೀ ರಿಲೀಸ್ ಟಿಕೆಟ್‌ಗೂ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರಾ ಸಿನಿಮಾ ಇನ್ನೇನು ತೆರೆಕಾಣಬೇಕಿದೆ.
ಸೆ.30ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿನಿಮಾ ಮೇಲೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈಗಾಗಲೇ ಪ್ರೀ ರಿಲೀಸ್‌ನ ಟಿಕೆಟ್ಸ್ ಕೂಡ ಖಾಲಿ ಆಗುತ್ತಿದ್ದು, ರಿಷಭ್ ಶೆಟ್ಟಿ ಏನೋ ಹೊಸತು ನೀಡುತ್ತಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ರಿಷಭ್ ಶೆಟ್ಟಿ ನಿರ್ದೇಶನದ ಸಿನಿಮಾ ಅಂದರೆ ಏನೋ ಹೊಸತು ಇದ್ದೇ ಇರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಈ ಸ್ಕ್ರಿಪ್ಟ್ ಪುನೀತ್ ರಾಜ್‌ಕುಮಾರ್ ಅವರಿಗೂ ಇಷ್ಟವಾಗಿತ್ತಂತೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಹೀರೋ ಪುನೀತ್ ಆಗಿರುತ್ತಿದ್ದರು ಎಂದು ತಂಡ ಹೇಳಿದೆ. ಸಿನಿಮಾದಲ್ಲಿ ರಿಷಭ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!