‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸೆಟ್‌ನಲ್ಲಿ ಅನುಪಮ್‌ ಖೇರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಮೂಲಕ ಸದ್ದು ಮಾಡಿರುವ ವಿವೇಕ್ ಅಗ್ನಿಹೋತ್ರಿ ಇದೀಗ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಸೆಟ್ ನಲ್ಲಿ ಅನುಪಮ್‌ ಖೇರ್‌ ಪ್ರತ್ಯಕ್ಷರಾಗಿದ್ದಾರೆ .

ಕ್ಲ್ಯಾಪ್‌ ಬೋರ್ಡ್‌ ಹಿಡಿದಿರುವ ಫೋಟೊ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬಾಲಿವುಡ್‌ನ ಪ್ರಖ್ಯಾತ ನಟ ನಾನಾ ಪಾಟೇಕರ್ ಅವರು ‘ದಿ ವ್ಯಾಕ್ಸಿನ್ ವಾರ್‌’ (The Vaccine War) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಅನುಪಮ್‌ ಖೇರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಖಾತ್ರಿಯಾದಂತಿದೆ.

ಅನುಪಮ್‌ ಖೇರ್‌ ಪೋಸ್ಟ್‌ ಮಾಡಿ, ‘ನನ್ನ 534 ನೇ ಚಲನಚಿತ್ರವನ್ನು ಘೋಷಿಸುತ್ತಿದ್ದೇನೆ. ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ವ್ಯಾಕ್ಸಿನ್ ವಾರ್ ಆಕರ್ಷಕ ಮತ್ತು ಸ್ಫೂರ್ತಿದಾಯಕʼ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!