ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ ಸೀಸನ್ 9’ ಕೊನೇ ಹಂತವನ್ನು ಸಮೀಪಿಸುತ್ತಿದ್ದು, ಈ ವಾರ ಮತ್ತೊಂದು ಆಟಗಾರ್ತಿ ಮನೆಯಿಂದ ಹೊರ ನಡೆದಿದ್ದಾರೆ.
ಈ ವಾರ ನಟಿ, ನಿರೂಪಕಿ ಅನುಪಮಾ ಗೌಡ ಅವರು ಔಟ್ ಆಗಿದ್ದಾರೆ. ಇಷ್ಟು ದಿನಗಳ ಕಾಲ ಫೈಟ್ ನೀಡಿದ್ದ ಅವರ ದೊಡ್ಮನೆ ಜರ್ನಿ ಈಗ ಅಂತ್ಯವಾಗಿದೆ.
ಈ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ ಸ್ಪರ್ಧಿಸಿದ್ದರು. ಆ ಅನುಭವದ ಆಧಾರದಲ್ಲಿ 9ನೇ ಸೀಸನ್ನಲ್ಲೂ ಭಾಗವಹಿಸುವ ಚಾನ್ಸ್ ಅವರಿಗೆ ಸಿಕ್ಕಿತು. ಆದರೆ ಈ ಬಾರಿಯೂ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ.
ಸದ್ಯ ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ಅಮೂಲ್ಯಾ ಗೌಡ, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಅರುಣ್ ಸಾಗರ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್ ನಡುವೆ ಹಣಾಹಣಿ ನಡೆಯುತ್ತಿದೆ.