ದಿನಭವಿಷ್ಯ| ಒಳ್ಳೆಯ ಕಾರ್ಯಕ್ಕೆ ಅಡ್ಡಿ ಒದಗೀತು, ಮುಂದೂಡಿರಿ ಒಳ್ಳೆಯದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹೊಸ ವ್ಯವಹಾರಕ್ಕೆ ಹಣ ಹೂಡುವಲ್ಲಿ ಹಿಂಜರಿಕೆ ಬೇಡ. ಒಳ್ಳೆಯ ಫಲ ಸಿಗಲಿದೆ. ಕೌಟುಂಬಿಕ ಒತ್ತಡದಿಂದ ಮನಶ್ಯಾಂತಿ ಹಾಳಾಗುವುದು. ಬಂಧುಗಳ ಮತ್ಸರ.

ವೃಷಭ
ಆಪ್ತರ ಜತೆಗೆ ಹದಗೆಟ್ಟ ಸಂಬಂಧ ಇಂದು ಸುಧಾರಿಸಲಿದೆ. ನಿಮ್ಮ ನಿಲುವನ್ನೆ ಸಾಧಿಸಲು  ಹಠ ಹಿಡಿಯಬೇಡಿ.   ಹೊಂದಾಣಿಕೆ ಸಾಧಿಸಿರಿ. ಆರ್ಥಿಕ ಉನ್ನತಿ.

ಮಿಥುನ
ಮಿಶ್ರ ಫಲದ ದಿನ. ನಿಮ್ಮ ಮಾತಿನ ಮೇಲೆ ಹೆಚ್ಚು ನಿಯಂತ್ರಣವಿರಲಿ. ಮಾತು ಮನೆ ಕೆಡಿಸಿತು ಎಂಬ ಗಾದೆ ನೆನಪಿಡಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಕಟಕ
ಪ್ರಮುಖ ಕಾರ್ಯಕ್ಕೆ ಅಡ್ಡಿ ಒದಗೀತು.ಅದನ್ನು ಮುಂದೂಡಿರಿ. ಹಳೆಯ ಸಮಸ್ಯೆಯೊಂದು ಮತ್ತೆ ತಲೆ ಎತ್ತಬಹುದು. ಶಾಶ್ವತ ಪರಿಹಾರ ಕಂಡುಕೊಳ್ಳಿ.

ಸಿಂಹ
ದೈನಂದಿನ ಹೊಣೆಗಾರಿಕೆ ನಿರ್ವಹಿಸುವಲ್ಲಿ ಅಸಡ್ಡೆ ತೋರದಿರಿ. ನಿಮ್ಮ ಕರ್ತವ್ಯ ನೆರವೇರಿಸಿ. ಖರ್ಚು ಹೆಚ್ಚಬಹುದು. ಅನವಶ್ಯ ಖರೀದಿಯನ್ನು ತಪ್ಪಿಸಿರಿ.

ಕನ್ಯಾ
ಹಳೆಯ ಕಾರ್ಯ ಮುಗಿಸಲು ಇಂದಿನ ದಿನ ಉಪಯೋಗಿಸಿ.  ಕಾರ್ಯದಲ್ಲಿ ಸಫಲತೆ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನವಿರಲಿ.

ತುಲಾ
ಎಂದಿಗಿಂತ ಹೆಚ್ಚು ಕೆಲಸ ಮಾಡಬೇಕಾಗುವುದು. ದಿನದ ಆರಂಭದಲ್ಲಿ ಕಠಿಣ ಸವಾಲು ಎದುರಿಸುವಿರಿ. ಆದರೆ ಬಳಿಕ ಎಲ್ಲವೂ ನಿರಾಳವಾಗುವುದು.

ವೃಶ್ಚಿಕ
ಇಂದು ಕೆಲವಾರು ಗುರಿಗಳನ್ನು  ಈಡೇರಿಸುವಿರಿ. ಹೊಸ ಐಡಿಯಾಗಳೂ ನಿಮಗೆ ಹೊಳೆಯಬಹುದು. ಉಳಿದವರ ಸಹಕಾರವೂ ಸಿಗುತ್ತದೆ.

ಧನು
ಅಧಿಕ ಕೆಲಸ. ಅಧಿಕ ಹೊಣೆಗಾರಿಕೆ. ಇದರಿಂದ ಮಾನಸಿಕ ಒತ್ತಡವೂ ಹೆಚ್ಚು. ವ್ಯವಹಾರದಲ್ಲಿ ಹಣದ ಹೂಡಿಕೆಯು ಉತ್ತಮ ಫಲ ನೀಡಲಿದೆ.

ಮಕರ
ಕ್ಲಿಷ್ಟಕರ  ಪರಿಸ್ಥಿತಿ ಎದುರಿಸುವಿರಿ. ಅದನ್ನು ಇನ್ನಷ್ಟು ಜಟಿಲವಾಗಲು ಅವಕಾಶ ಕೊಡಬೇಡಿ. ಸಮಸ್ಯೆ ಪರಿಹಾರಕ್ಕೆ ತುಸು ಹೊಂದಾಣಿಕೆ ಮಾಡಿಕೊಳ್ಳಿ.

ಕುಂಭ
ಸಂಬಂಧದಲ್ಲಿ ಸುಧಾರಣೆ. ಕೌಟುಂಬಿಕ ಸಮಸ್ಯೆ ನಿವಾರಣೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಒಟ್ಟಿನಲ್ಲಿ ನಿಮಗಿಂದು ಶುಭ ದಿನ.

ಮೀನ
ಹೊಸ ವ್ಯವಹಾರ ಯಶ ಕಾಣುವುದು. ಎಲ್ಲರಿಂದ ಉತ್ತಮ ಸಹಕಾರ ಒದಗುವುದು.ಮತ್ಸರಿಗಳ ಕುರಿತಂತೆ ಎಚ್ಚರ ವಹಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!