ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 50 ನೇ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಕ್ರಿಕೆಟ್ ದೇವರು, ಅಭಿಮಾನಿಗಳು ಮಾತ್ರವಲ್ಲದೆ..ಪತ್ನಿ, ಜನಪ್ರಿಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ತನ್ನ ಪತಿಯ ಸಾಧನೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸದ್ಯ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪತಿ ಕೊಹ್ಲಿ ಅವರ ದಾಖಲೆಯನ್ನು ಕೊಂಡಾಡಿದ ಅನುಷ್ಕಾ ಶರ್ಮಾ ʻನೀವು ನಿಜವಾಗಿಯೂ ದೇವರ ಮಗುʼ ಎಂಬ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. “ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನಿಮ್ಮ ಪ್ರೀತಿಯ ಆಶೀರ್ವಾದದ ಜೊತೆಗೆ ನನಗೆ ವಿರಾಟ್ ಕೊಹ್ಲಿಯ ಪ್ರೀತಿ ಕೂಡ ದೊರೆತಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಬೇಕೆಂದು ಆಶಿಸುತ್ತೇನೆ” ಎಂದು ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
Anushka Sharma about Virat Kohli:
– “You are truly Gods Child”. pic.twitter.com/ZIi9K9ZUjO
— Johns. (@CricCrazyJohns) November 15, 2023