ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ
ಚೀಸ್
ಕ್ರೀಂ
ಬೆಣ್ಣೆ
ಬೆಳ್ಳುಳ್ಳಿ ಪುಡಿ
ಮೆಣಸು
ಮಾಡುವ ವಿಧಾನ:
ಮೊದಲು ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ. ಆಲೂಗಡ್ಡೆ ಬೆಂದ ನಂತರ ನೀರನ್ನು ತೆಗೆಯಿರಿ.
ಈಗ ಒಂದು ದೊಡ್ಡ ಪಾತ್ರೆಗೆ ಆಲೂಗಡ್ಡೆ, ಚೀಸ್, ಕ್ರೀಂ, ಬೆಣ್ಣೆ, ಬೆಳ್ಳುಳ್ಳಿ ಪುಡಿ ಮತ್ತು ಮೆಣಸನ್ನು ಹಾಕಿಕೊಳ್ಳಿ. ಇದನ್ನು ಮಿಕ್ಸರ್ ಬಳಸಿ ಚೆನ್ನಾಗಿ ಕಲಸಿ.
ಈಗ ಮಿಶ್ರಣವು ಒಂದು ಹದಕ್ಕೆ ಬಂದ ನಂತರ ಒವೆನ್ ನ ಪಾತ್ರೆಗೆ ಹಾಕಿ ಜೊತೆಗೆ ಚೀಸ್ ಹಾಕಿ ಮುಚ್ಚಳ ಮುಚ್ಚಿ ಒವೆನ್ ನಲ್ಲಿಟ್ಟು 45 ನಿಮಿಷಗಳವರೆಗೆ ಬೇಯಿಸಿ. ಬಳಿಕ ಮತ್ತೆ ಮುಚ್ಚಳ ತೆಗೆದು ಇದನ್ನು 15 ನಿಮಿಷಗಳವರೆಗೆ ಬೇಯಿಸಿದರೆ ವಿಭಿನ್ನ ರುಚಿಯ ಕ್ರೀಮಿ ಚೀಸ್ ಆಲೂಗಡ್ಡೆ ಪಲ್ಯ ಸವಿಯಲು ಸಿದ್ಧ.