ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಅನುಷ್ಕಾ ಶರ್ಮಾ ತೆರಿಗೆ ಇಲಾಖೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಅನುಷ್ಕಾ ಇದೀಗ ತಮ್ಮ ಮೇಲೆ ಸುಳ್ಳು ತೆರಿಗೆ ಹಾಕಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2013-14ನೇ ಸಾಲಿನ ತೆರಿಗೆ ಪಾವತಿಸುವಂತೆ ಮಾರಾಟ ತೆರಿಗೆ ಇಲಾಖೆ ಆಯುಕ್ತರು ಅನುಷ್ಕಾಗೆ ಸೂಚಿಸಿದ್ದು, ಇದನ್ನು ಪ್ರಶ್ನಿಸಿ ನಟಿ ಕೋರ್ಟ್ ಮೆಟ್ಟಿಲೇರಿದ್ದರು.
ಅನುಷ್ಕಾ ವಿದೇಶದಲ್ಲಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ಆದರೆ ಮಾರಾಟ ತೆರಿಗೆ ಪಾವತಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.
ಕಾರ್ಯಕ್ರಮ, ಸಮಾರಂಭಗಳು ಮಾರಾಟ ತೆರಿಗೆ ವ್ಯಾಪ್ತಿಗೆ ಸೇರಿಲ್ಲ ಹಾಗೂ ಕಾರ್ಯಕ್ರಮ ಪ್ರಸಾರ ಹಕ್ಕನ್ನು ಅನುಷ್ಕಾ ಹೊಂದಿಲ್ಲ ಎಂದು ಅನುಷ್ಕಾ ತೆರಿಗೆ ಸಲಹೆಗಾರರು ಹೇಳಿದ್ದರು. ಸ್ವತಃ ಅನುಷ್ಕಾ ಅವರೇ ಅರ್ಜಿ ಸಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ಇದೀಗ ಅನುಷ್ಕಾ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.