ಕನ್ನಡ ಕಿರುತೆರೆಯಲ್ಲಿ ಸತತವಾಗಿ ವೀಕ್ಷಕರಿಗೆ ಮನೋರಂಜೆಯನ್ನು ಕೊಡುತ್ತಾ ಬಂದಿರುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʼಲಕ್ಷಣʼ ಧಾರವಾಹಿ ದಿನೇ ದಿನೇ ಕಾತುರದಿಂದ ನೋಡುವಂತೆ ಮಾಡುತ್ತಿದೆ.
ನಿನ್ನೆಯ ಸಂಚಿಕೆಯಲ್ಲಿ ಅತ್ತೆ ಶಕುಂತಲಾದೇವಿ ಮತ್ತು ಸಿ.ಎಸ್ ಚಂದ್ರಶೇಖರ್ ನೀಡಿರುವ ಸವಾಲಿನಲ್ಲಿ ಶ್ವೇತಾ ಮತ್ತು ನಕ್ಷತ್ರಾ ಬೆಳಗಿನ ಬ್ರೇಕ್‌ಫಾಸ್ಟ್ ಅನ್ನು ತಯಾರು ಮಾಡ್ತಾರೆ. ಇಲ್ಲಿ ಮೂರನೆಯ ವ್ಯಕ್ತಿಯ ಕುತಂತ್ರದಿಂದ ನಕ್ಷತ್ರಾ ಅಡುಗೆ ಮಾಡುವುದರಲ್ಲಿ ತಡವಾಗುತ್ತದೆ. ಹಾಗಾಗಿ ನಕ್ಷತ್ರ ಚಿತ್ರಾನ್ನ ಅನ್ನು ತಿಂಡಿಗೆ ತಯಾರಿಸಿ ಅತ್ತೆ ಶಕುಂತಲಾ ದೇವಿಗೆ ನೀಡುತ್ತಾಳೆ.
ಈ ಸಂದರ್ಭದಲ್ಲಿ ನೀನೇನಾದ್ರೂ ವಿಶೇಷವಾಗಿ ಮಾಡ್ತಿಯಾ ಅಂದುಕೊಂಡ್ರೆ, ಮಿಕ್ಕಿರೋ ಅನ್ನಕ್ಕೆ ಸಾಸಿವೆ ಒಗ್ಗರೆಣ್ಣೆ ಕೊಟ್ರೆ ಅದ್ರಲ್ಲೇನಿದೆ ವಿಶೇಷ ಎಂದು ಶ್ವೇತಾ ಹೀಯಾಳಿಸುತ್ತಾಳೆ. ಅದಕ್ಕೆ ಪ್ರತ್ಯುತ್ತರ ನೀಡಿದ ನಕ್ಷತ್ರ ಅನ್ನಕ್ಕೆ ಒಗ್ಗರೆಣ್ಣೆ ಹಾಕಿದ್ದೇನೆ ಅಂತ ಚಿತ್ರಾನ್ನ ಪ್ರಿಯರಿಗೆ ಅವಮಾನಿಸಬೇಡ, ʼಅರ್ಧಕರ್ಧ ಬೆಂಗಳೂರು ಮೈಸೂರು ನಿಂತಿರೋದೆ ಈ ಚಿತ್ರಾನ್ನದ ಮೇಲೆʼ ಎಂದು ಟಾಂಗ್ ಕೊಡುತ್ತಾಳೆ.
ಧಾರವಾಹಿಯಲ್ಲಿ ಭೂಪತಿಯ ಪತ್ನಿಯಾಗಿರುವ ನಕ್ಷತ್ರ ಭೂಪತಿಗೆ ಸೂಕ್ತಳಾದವಳಲ್ಲ ಮತ್ತು ಶ್ವೇತಾ ಈ ಮನೆಗೆ ಸೂಕ್ತಳಾದ ಸೊಸೆ ಎಂಬ ಭೂಪತಿ ತಾಯಿ ಶಕುಂತಲಾದೇವಿಯ ಹೇಳಿಕೆಗೆ ನಕ್ಷತ್ರಾಳ ತಂದೆ ಉದ್ಯಮಿ ಸಿ.ಎಸ್ ಚಂದ್ರಶೇಖರ್ ಸವಾಲನ್ನು ಒಡ್ಡಿದ್ದಾರೆ. ಕೇವಲ 500 ರೂ ನಗದು ಬಳಸಿ ಒಂದು ದಿನಕ್ಕೆ ಮನೆಯನ್ನು ಶ್ವೇತಾ ಮತ್ತು ನಕ್ಷತ್ರ ಇವರಿಬ್ಬರಲ್ಲಿ ಯಾರು ಸಂಬಳಿಸುತ್ತಾರೋ ಅವರೇ ಈ ಮನೆಗೆ ತಕ್ಕ ಸೊಸೆ ಎಂಬ ಪಂದ್ಯವನ್ನು ಅವರು ಮುಂದಿಟ್ಟಿದ್ದಾರೆ.
ಈ ವಾರದ ಸಂಚಿಕೆಯು ವೀಕ್ಷಿಕರ ಕುತೂಹವನ್ನು ಹೆಚ್ಚಿಸಿದ್ದರು, ಈ ಪಂದ್ಯದಲ್ಲಿ ಯಾರು ವಿಜಯಶಾಲಿಯಾಗುತ್ತಾರೆ ಮತ್ತು ಯಾರು ಶಕುಂತಲಾದೇವಿಗೆ ತಕ್ಕ ಸೊಸೆ ಎಂದು ನಿರ್ಧಾರವಾಗುತ್ತೆ ಎಂದು ಕಾದು ನೋಡಬೇಕಿದೆ.